ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನುಗ್ಗಿದ ಬಸ್; 2 ವರ್ಷದ ಮಗು ಮೃತ ನಾಲ್ವರಿಗೆ ಗಾಯ

0
80

ಹಾವೇರಿ : ನಗರದ ಎನ್‌ಡಬ್ಲ್ಯು ಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಘೋರ ಅಪಘಾತ ನಡೆದಿದೆ. ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದವರ ಮೇಲೆ ಬಸ್‌ ನುಗ್ಗಿದ ಪರಿಣಾಮವಾಗಿ ಎರಡು ವರ್ಷದ ಪುಟ್ಟ ಮಗು ಮೃತಪಟ್ಟಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾಯವ್ಯ ಕರ್ನಾಟಕ ಸಾರಿಗೆ ಬಸ್‌ ಚಾಲಕ ಮಂಜುನಾಥ ಎಂಬಾತನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ದುರಂತ ಸಂಭವಿಸಿದೆ. ಪ್ಲಾಟ್ ಫಾರ್ಮ್‌ ನಂ.2 ಕಡೆಗೆ ಏಕಾಏಕಿ ಸಾರಿಗೆ ಬಸ್‌ ನುಗ್ಗಿದ್ದಕಾರಣ ಸವಣೂರಿನ ಹಜರತ್‌ ಅಲಿ (2) ಮಗು ಸಾವನ್ನಪ್ಪಿದೆ. ಘಟನೆಯಲ್ಲಿ ಬಂಕಾಪುರದ ವಾಸುದೇವ (44), ಹರ್ಷ (6), ಕಾವ್ಯಾಂಜಲಿ (39), ಅರಬಜ್‌ಖಾನ್‌ (13) ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here