ನೀರಿನ ಬಕೆಟ್‌ನಲ್ಲಿ ಬಿದ್ದು ಮಗು ಮೃತ : ಕಂದಮ್ಮ ಅಗಲಿಕೆಯಿಂದ ಮನನೊಂದು ತಾಯಿ ಆತ್ಮಹತ್ಯೆ

0
92

ಬೆಂಗಳೂರಿನಲ್ಲಿ ಮನಕಲುಕುವ ಘಟನೆ ನಡೆದಿದೆ. 11 ತಿಂಗಳ ಮಗು ಬಾತ್‌ರೂಮ್‌ನಲ್ಲಿದ್ದ ನೀರಿನ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿದ ಕೆಲವೇ ಕ್ಷಣಗಳಲ್ಲಿ, ಆ ದುಃಖವನ್ನು ತಾಳಲಾರದೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ತಾಯಿ ಪ್ರತಿಭಾ (29) ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಸುಮಾರು 11 ತಿಂಗಳ ಹಿಂದೆ ಇವರಿಗೆ ಗಂಡು ಮಗು ಜನಿಸಿತ್ತು. ಘಟನೆ ನಡೆದ ವೇಳೆ ಪತಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರೆ, ತಾಯಿ ಮತ್ತು ಮಗು ಮನೆಯಲ್ಲಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತಿಭಾ ಒಣಗಿಸಿದ್ದ ಬಟ್ಟೆಗಳನ್ನು ತರಲು ಟೆರೆಸ್‌ಗೆ ತೆರಳಿದ್ದಾಗ ಮಗು ಮನೆಯ ಬಾತ್‌ರೂಮ್ ಕಡೆಗೆ ಹೋಗಿದೆ. ಅಲ್ಲಿ ಇದ್ದ ನೀರಿನ ಬಕೆಟ್‌ಗೆ ಮಗು ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮಗುವಿನ ಸ್ಥಿತಿ ಕಂಡು ಆಘಾತಕ್ಕೊಳಗಾದ ಪ್ರತಿಭಾ, ಮಗುವಿನ ಸಾವಿಗೆ ತಾನೇ ಕಾರಣ ಎಂದು ನೊಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಮನೆಗೆ ಮರಳಿದ ಪತಿ ಪತ್ನಿ ಬಾಗಿಲು ತೆರೆಯದಿದ್ದರಿಂದ ಸ್ಪೇರ್ ಕೀ ಮೂಲಕ ಒಳಗೆ ಹೋಗಿ ತಾಯಿ-ಮಗುವಿನ ಶವಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here