ಕೊಳಲಗಿರಿ : ಪಿಂಕ್ ಸೂಪರ್ ಮೂನ್ ಸಂಭ್ರಮ – ಜನರಿಗೆ ಅಪೂರ್ವ ಅನುಭವ

0
13

ಉಡುಪಿ : ವಸಂತ ಋತುವಿನ ವಿಶೇಷ ಖಗೋಳೀಯ ಘಟನೆಯಾದ ‘ಪಿಂಕ್ ಸೂಪರ್ ಮೂನ್’ ವೀಕ್ಷಣೆಗೆ ಕೊಳಲಗಿರಿಯಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ವ್ಯಕ್ತವಾಯಿತು.

ಕೊಳಲಗಿರಿಯ ವಿಹಂಗಮ ನೋಟ ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಸಮೀಪದ ಮಂಜುನಾಥ್ ಕುಲಾಲ್ ಅವರ ಮನೆಯ ತಾರಸಿನ ಮೇಲೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಫ್ರಾಂಕಿ ಡಿಸೋಜ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಳುನಾಡಿನ ಹೆಮ್ಮೆ ಆಗಿರುವ ಆರ್. ಮನೋಹರ್ ಅವರ ಸಾಧನೆಯನ್ನು ಶ್ಲಾಘಿಸಿ, ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದ ದೂರದರ್ಶಕದ ಮೂಲಕ ಜನಸಾಮಾನ್ಯರಿಗೆ ‘ಪಿಂಕ್ ಸೂಪರ್ ಮೂನ್’ ಅನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿರುವುದು ಅಭಿನಂದನೀಯ ಎಂದರು.

ಆರ್. ಮನೋಹರ್ ಅವರ ವಿಶೇಷ ದೂರದರ್ಶಕದ ನೆರವಿನಿಂದ ಭಾಗವಹಿಸಿದವರು ಚಂದ್ರನ ಅದ್ಭುತ ದೃಶ್ಯವನ್ನು ಸಮೀಪದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ಪ್ರಕಾಶ್ ಭಂಡಾರಿ, ಹಿರಿಯರಾದ ಜಯಶೆಟ್ಟಿ (ಬನ್ನಂಜೆ), ಸುರೇಂದ್ರ ಪೂಜಾರಿ, ರತ್ನಾಕರ ಮೊಗವೀರ, ಹಾವಂಜೆ, ತೌಡ ಪೂಜಾರಿ, ಮಂಜುನಾಥ್ ಕುಲಾಲ್, ಸುಂದರ ಪೂಜಾರಿ, ಕರ್ಜೆ ಕಾಲೇಜಿನ ಉಪನ್ಯಾಸಕ ರಾಜೇಶ್ ಹಾಗೂ ಸಹ ಉಪನ್ಯಾಸಕರು ಉಪಸ್ಥಿತರಿದ್ದರು.

ಹಾವಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸದಾಶಿವ ಮತ್ತು ಕಾರ್ತಿಕ್, ಹೋಟೆಲ್ ಮಾಲಕರಾದ ಗೋಪಾಲ ಪೂಜಾರಿ, ದಿನೇಶ್ ನಾಯ್ಕ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಗಣೇಶ್ ರಾಜ್ ಸರಳಬೆಟ್ಟು ಮತ್ತು ರಾಜೇಶ್ ಪ್ರಭು ಪರ್ಕಳ ಅವರು ಕಾರ್ಯ ನಿರ್ವಹಿಸಿದರು.

ಒಟ್ಟಾರೆ, ‘ಪಿಂಕ್ ಸೂಪರ್ ಮೂನ್’ ವೀಕ್ಷಣಾ ಕಾರ್ಯಕ್ರಮವು ಖಗೋಳ ವಿಜ್ಞಾನವನ್ನು ಜನಸಾಮಾನ್ಯರ ಬಳಿ ತಲುಪಿಸುವಲ್ಲಿ ಯಶಸ್ವಿಯಾಗಿ ನೆರವೇರಿದದ್ದಾಗಿ ಅಭಿಪ್ರಾಯ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here