ಕಾವೂರು : ಫಲ್ಗುಣಿ ನದಿಯಲ್ಲಿ ಮುಳುಗಿ ಓರ್ವ ಯುವಕ ಮೃತ್ಯು, ಮತ್ತೊಬ್ಬ ನಾಪತ್ತೆ

0
11

ಕಾವೂರು : ದೋಣಿಯಲ್ಲಿ ಮೀನು ಹಿಡಿಯಲು ಫಲ್ಗುಣಿ ನದಿಗೆ ತೆರಳಿದ್ದ ಮೂವರು ಯುವಕರ ಪೈಕಿ ಓರ್ವ ಯುವಕ ನೀರುಪಾಲಾಗಿದ್ದು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಕಾವೂರು ಕುಂಜತ್ತಬೈಲ್ ನಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ಕುಂಜತ್ತಬೈಲ್ ನಿವಾಸಿ ಗಣೇಶ್ (28) ಎಂದು ಗುರುತಿಸಲಾಗಿದೆ , ರಾಯಲ್ (27) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೀನು ಹಿಡಿಯಲೆಂದು ಮೂವರು ಗೆಳೆಯರು ಸಣ್ಣ ದೋಣಿಯೊಂದರಲ್ಲಿ ಫಲ್ಗುಣಿ ನದಿಗೆ ತೆರಳಿದ್ದರು. ಮೀನು ಹಿಡಿಯುತ್ತಿದಾಗ ಆಯಾತಪ್ಪಿ ದೋಣಿ ಮಗುಚಿ ನದಿಗೆ ಬಿದ್ದಿದೆ ಎನ್ನಲಾಗಿದೆ. ಮೂವರೂ ನೀರಿಗೆ ಬಿದ್ದಿದ್ದ, ಈ ಪೈಕಿ ಈಜಲು ಬಾರದ ಗಣೇಶ್ ಹಾಗೂ ರಾಯಲ್ ನೀರಿನಲ್ಲಿ ಮುಳುಗಿದ್ದಾರೆ ನಿತೇಶ್ (29) ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ನದಿಯಲ್ಲಿ ಮುಳುಗಿದ್ದ ಯುವಕರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಆರಂಭಿಸಿ ಮಧ್ಯಾಹ್ನ ವೇಳೆಗೆ ಗಣೇಶ್ ಮೃತದೇಹ ಪತ್ತೆಹಚ್ಚಿದ್ದಾರೆ. ರಾಯಲ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here