ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಬ್ರಹ್ಮಕಲಶೋತ್ಸವಕ್ಕೆ ಭಕ್ತಿ ಭರಿತ ಚಾಲನೆ

0
13

ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ  ಪುನರ್ ಪ್ರತಿಷ್ಠಾ  ಬ್ರಹ್ಮಕಲಶೋತ್ಸವ  ಅಂಗವಾಗಿ ಗುರುವಾರ ಪ್ರಧಾನ ಅರ್ಚಕರಾದ  ಗೋಪಾಲಕೃಷ್ಣ ಉಪಾಧ್ಯಾಯ  ಬೃಹತ್ ಗಂಟೆಯಾ  ಉದ್ಘಾಟನೆ  ನೆರವೇರಿಸಿದರು.  ಮತ್ತು  ಶ್ರೀ ದೇವರ  ಸನ್ನಿಧಿಯಲ್ಲಿ   ಸಾಮೂಹಿಕವಾಗಿ ಹನುಮಾನ್ ಚಾಲೀಸ್  ಪಠಣ ಕೆ  ಚಾಲನೆ ನೀಡಲಾಯಿತು , ಸೇರಿದ ಭಕ್ತರಿಂದ ಸಾಮೂಹಿಕ  ಹನುಮಾನ್ ಚಾಲೀಸ್  ಪಠಣ  ಜರಗಿತು ಬಳಿಕ  ಮಕ್ಕಳಿಂದ ಹಾಗೂ ವಿವಿಧ ಭಜನಾ ತಂಡದವರಿಂದ  ಭಜನಾ ಕಾರ್ಯಕ್ರಮ ಜರಗಿತು .

ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ   ಸರೋಜಿನಿ ಜಯ ಶೆಟ್ಟಿ  ಸಂಗ್ರಹಿಸಿದ  ” ಕಾರ್ಣಿಕದ ಕ್ಷೇತ್ರ ಇಂದ್ರಾಣಿ  ”  ಪುಸ್ತಕ  ವನ್ನು  ಶಿವಾನಂದ ಭಾರತಿ ಸ್ವಾಮಿಜೀ ಬಿಡುಗಡೆ ಮಾಡಿ ಶುಭ ಹಾರೈಸಿದರು.                                                                                                                                                                                       

ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಭೂಪತಿ ಶೆಟ್ಟಿ , ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕುಶಲ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ , ಯೋಗೀಶ ಭಟ್,  ವಿವಿಧ  ಸಮಿತಿಯ  ಪಧಾದಿಕಾರಿಗಳು, ನೂರಾರು ಭಕ್ತರೊ ಉಪಸ್ಥರಿದ್ದರು. 

LEAVE A REPLY

Please enter your comment!
Please enter your name here