ಸುಸಂಪನ್ನಗೊಂಡ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಶ್ರೀ ಹನುಮ ಜಯಂತಿ

0
22

ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 25 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ದವನದ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಈ ತಿಂಗಳ ಹುಣ್ಣಿಮೆಯ ಪೂಜಾ ಸೇವೆಯನ್ನು ಪ್ರೇಮ್‌ಜಿ ಪಾಟೀಲ್ ಮತ್ತು ವಿ.ಕೃಷ್ಣಮೂರ್ತಿ ಕುಟುಂಬದವರು ಸೇವೆ ಸಲ್ಲಿಸಿದರು. ನಿನ್ನೆ ತಾನೇ ನಡೆದ ಈ ಆಧ್ಯಾತ್ಮಿಕ ಪರಂಪರೆಯ ಸಮಾರಂಭದಲ್ಲಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್, ಖಜಾಂಚಿ ಪುರುಷೋತ್ತಮ ಪಟೇಲ್, ಸಂಚಾಲಕರಾದ ಭಾವನ್ನಾರಾಯಣ ಸತೀಶ್ ಆರ್.ಎಂ., ಗಣೇಶ್‌ರಾಯ್ಕರ್, ಗುರುಮೂರ್ತಿ, ಚಂದ್ರಶೇಖರ ಅಡಿಗ, ಆಶಾ ವಿಠೋಬಶ್ಯಾನಬಾಗ್, ಶಿವಕುಮಾರ್, ಡಾ|| ಸುಶೀಲಮ್ಮ, ಕೆ.ಸಿ.ಉಮೇಶ್, ಎಂ.ಎಸ್.ಪ್ರಸಾದ್, ವಿಕ್ರಂಜೈನ್, ಗೀತಾಂಜಲಿ, ಶಾಂತರಾಮ ಸೋಮಯಾಜಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here