ಭಾರತೀಯ ರೈಲ್ವೇ ಇಲಾಖೆಯಲ್ಲಿ 17,692 ಹುದ್ದೆಗಳ ನೇಮಕಾತಿ.!

0
33

ಭಾರತೀಯ ರೈಲ್ವೆಯು ಟೆಕ್ನಿಷಿಯನ್ ಮತ್ತು ಲೋಕೋ ಪೈಲಟ್ ವಿಭಾಗದಲ್ಲಿ ಸುಮಾರು 17,692 ಹುದ್ದೆಗಳ ಬೃಹತ್ ನೇಮಕಾತಿಗೆ ಮುಂದಾಗಿದೆ. ಈ ಹುದ್ದೆಗಳಿಗಿರುವ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಹಂತ-ಹಂತದ ಮಾಹಿತಿ ಇಲ್ಲಿದೆ .

ಭಾರತೀಯ ರೈಲ್ವೆಯು ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ನೀಡಿದ್ದು, ಟೆಕ್ನಿಷಿಯನ್ (Technician) ಮತ್ತು ಎಎಲ್‌ಪಿ (Assistant Loco Pilot – ALP) ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 17,692 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದೆ.

* ಟೆಕ್ನಿಷಿಯನ್ (Technician): 6,565 ಹುದ್ದೆಗಳು
* ಅಸಿಸ್ಟೆಂಟ್ಲೋಕೋಪೈಲಟ್ (ALP): 11,127 ಹುದ್ದೆಗಳು
* ಒಟ್ಟು ಹುದ್ದೆಗಳು: 17,692

ಶೈಕ್ಷಣಿಕಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ (SSLC) ಜೊತೆಗೆ ಐಟಿಐ (ITI) ಅಥವಾ ಡಿಪ್ಲೊಮಾ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು. ವರ್ಗವಾರು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ (SC/ST ಮತ್ತು OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ).

ಆಯ್ಕೆಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1 & CBT-2), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ: ಆಸಕ್ತರು ರೈಲ್ವೆ ನೇಮಕಾತಿ ಮಂಡಳಿಯ (RRB) ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here