ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ನೈರ್ಮಲ್ಯ ಕೇಂದ್ರ, ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಕಡ್ಡಾಯ : `CBSE’ ಮಹತ್ವದ ಆದೇಶ..!

0
30

ನವದೆಹಲಿ : ಶಾಲಾ ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಮಹತ್ವದ ಹೆಜ್ಜೆ ಇರಿಸಿದೆ. ದೇಶದಾದ್ಯಂತ ಇರುವ ತನ್ನೆಲ್ಲಾ ಸಂಯೋಜಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಲಭ್ಯತೆ ಮತ್ತು ಋತುಸ್ರಾವ ನೈರ್ಮಲ್ಯ ಕೇಂದ್ರಗಳನ್ನು (Menstrual Hygiene Hubs) ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿ ಮಂಡಳಿಯು ಸೂಚನೆ ನೀಡಿದೆ.

ಶಿಕ್ಷಣ ಸಚಿವಾಲಯದ ಮೂಲಕ ಬಂದ ಸುಪ್ರೀಂ ಕೋರ್ಟ್‌ನ ಜನವರಿ 20ರ ತೀರ್ಪನ್ನು ಉಲ್ಲೇಖಿಸಿರುವ ಸಿಬಿಎಸ್‌ಇ, ಈ ವ್ಯವಸ್ಥೆಗಳನ್ನು ಜಾರಿಗೊಳಿಸುವುದು ಕಡ್ಡಾಯ ಎಂದು ತಿಳಿಸಿದೆ. ಶಾಲೆಗಳು ‘ಋತುಸ್ರಾವ ನೈರ್ಮಲ್ಯ ನಿರ್ವಹಣೆ’ (MHM) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.


ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ, ಸುರಕ್ಷಿತ ಮತ್ತು ಸ್ವಚ್ಛವಾದ ಶೌಚಾಲಯಗಳ ವ್ಯವಸ್ಥೆ ಇರಬೇಕು, ಶಾಲೆಗಳಲ್ಲಿ ಸುಲಭವಾಗಿ ಕರಗಬಲ್ಲ (Biodegradable) ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸಬೇಕು. ಶಾಲಾ ಆವರಣದಲ್ಲಿ ಅಗತ್ಯ ಸೌಲಭ್ಯವುಳ್ಳ ಋತುಸ್ರಾವ ನೈರ್ಮಲ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಕೈ ತೊಳೆಯಲು ಮತ್ತು ಸ್ವಚ್ಛತೆಗಾಗಿ ಸಾಕಷ್ಟು ನೀರಿನ ವ್ಯವಸ್ಥೆ ಕಲ್ಪಿಸಬೇಕು.

ಈ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಶಾಲೆಗಳು ನಿಗದಿತ ಸಮಯದೊಳಗೆ ವರದಿ ಸಲ್ಲಿಸಬೇಕಿದೆ. ಏಪ್ರಿಲ್ 2026ರ ಮಾಸಿಕ ವರದಿಯನ್ನು ಶಾಲೆಗಳು ಏಪ್ರಿಲ್ 30ರೊಳಗೆ ಮಂಡಳಿಯು ನೀಡಿರುವ ಗೂಗಲ್ ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ಸಿಬಿಎಸ್‌ಇ ಕಟ್ಟುನಿಟ್ಟಿನ ಆದೇಶ ನೀಡಿದೆ.

LEAVE A REPLY

Please enter your comment!
Please enter your name here