ಇರುವೈಲ್‌, ದಿಡ್ಡು : ಏ.15-17ರವರೆಗೆ ಶ್ರೀ ಧರ್ಮರಸು ಉಳ್ಳಾಯ, ಕೊಡಮಣಿತ್ತಾಯ ದೈವಗಳ ವರ್ಷಾವಧಿ ನೇಮೋತ್ಸವ

0
23

ಮೂಡುಬಿದಿರೆ : ಏ.15ರಂದು ಸಂಜೆ 5:00ಗಂಟೆಯಿಂದ ದೇವತಾ ಪ್ರಾರ್ಥನೆ, ಸಂಜೆ 6:00 ಗಂಟೆಯಿಂದ ಭಜನಾ ಕಾರ್ಯಕ್ರಮ, ಸಂಜೆ 7:00 ಗಂಟೆಗೆ ದುರ್ಗಾ ನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ : 16-04-2026ನೇ ಗುರುವಾರ ಬೆಳಿಗ್ಗೆ 9:00 ಗಂಟೆಗೆ ಕೋಳಿಕುಂಟ, ಚೆಂಡು, ಬೆಳಿಗ್ಗೆ 10:00 ಗಂಟೆಗೆ ಕೆಳಗಿನ ಬಾಳಿಕೆ ನಾಗಬನದಲ್ಲಿ ತಂಬಿಲ ಸೇವೆ , ಸಂಜೆ 4:00 ಗಂಟೆಗೆ ದಿಡ್ಡು ದೈವಸ್ಥಾನದಿಂದ ದೈವಗಳ ಭಂಡಾರ ಇಳಿದು ಚೂರ್ಣ ಮುಹೂರ್ತ ಭಂಡಾರ ಏರುವುದು, ಬೆಲ್ಲಕಾಯಿ ಹಬ್ಬ, ವಿಶೇಷ ಹೂವಿನ ಪೂಜೆ ರಾತ್ರಿ 7:00 ಗಂಟೆಗೆ ಶ್ರೀ ಧರ್ಮರಸು ಉಳ್ಳಾಯ ದೈವದ ಗಗ್ಗರ ಸೇವೆ, ರಾತ್ರಿ 8:00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಹಾಗೂ ರಾತ್ರಿ 8:30 ಗಂಟೆಗೆ ಕೊಡಮಣಿತ್ತಾಯ ರಾಜಂದೈವದ ಗಗ್ಗರ ಸೇವೆ, ಚೆಂಡು, ಪ್ರಸಾದ ವಿತರಣೆ ನಡೆಯಲಿರುವುದು.

ದಿನಾಂಕ: 17-04-2026ನೇ ಶುಕ್ರವಾರ ಬೆಳಿಗ್ಗೆ ಕುಂಟ ವಿಸರ್ಜನೆ ನಡೆಯಲಿದೆ.

LEAVE A REPLY

Please enter your comment!
Please enter your name here