ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಮೂಡುಬಿದಿರೆ ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿಗೆ ಶೇ.97.60 ಫಲಿತಾಂಶ

0
2

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಮೂಡುಬಿದ್ರೆಯಶ್ರೀ ಮಹಾವೀರ ಪದವಿಪೂರ್ವಕಾಲೇಜಿಗೆ ಶೇಕಡಾ 97.60 ಫಲಿತಾಂಶ ಲಭಿಸಿರುತ್ತದೆ. ಪರೀಕ್ಷೆಗೆ ಹಾಜರಾದ ಒಟ್ಟು 167 ವಿದ್ಯಾರ್ಥಿಗಳ ಪೈಕಿ 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪೂರ್ಣಿಮಾ( 97.50 %), ವಿಜ್ಞಾನ ವಿಭಾಗದಲ್ಲಿ ಕುಸುಮಾ.ಡಿ.ಟಿ. ಮತ್ತು ನಿಧಿ ಬೆಡೇಕರ್( 97.33 %) ಮತ್ತು ಕಲಾ ವಿಭಾಗದಲ್ಲಿ ಗೀತಾ(90%)ಅತ್ಯಧಿಕ ಅಂಕಗಳನ್ನು ಪಡೆದಿರುತ್ತಾರೆ ಎಂದು ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಲೆಪ್ಟಿನೆಂಟ್ ವಿಜಯಲಕ್ಷ್ಮಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here