ಇಂದಿನಿಂದ ಹೈವೇ ಪ್ರಯಾಣಿಕರಿಗೆ ಹೊಸ ನಿಯಮ : ಟೋಲ್‌ನಲ್ಲಿ ನಗದು ಪಾವತಿ ಇನ್ಮುಂದೆ ಬಂದ್..!

0
102

ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ಟೋಲ್ ಪ್ಲಾಜಾಗಳಲ್ಲಿ ಭಾರಿ ಬದಲಾವಣೆಗಳನ್ನು ಘೋಷಿಸಿದೆ. ಇನ್ಮುಂದೆ ಟೋಲ್ ಕೇಂದ್ರಗಳಲ್ಲಿ ನಗದು ವ್ಯವಹಾರ ಸಂಪೂರ್ಣವಾಗಿ ಬಂದ್ ಆಗಲಿದ್ದು, ಐಡಿ ಕಾರ್ಡ್‌ಗಳನ್ನು ತೋರಿಸಿ ವಿನಾಯಿತಿ ಪಡೆಯುವ ಪದ್ಧತಿಗೂ ಬ್ರೇಕ್ ಬೀಳಲಿದೆ.

ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ಹಣವನ್ನು (Cash) ಸ್ವೀಕರಿಸಲಾಗುವುದಿಲ್ಲ. ಎಲ್ಲಾ ವಹಿವಾಟುಗಳು ಕಡ್ಡಾಯವಾಗಿ ಡಿಜಿಟಲ್ ರೂಪದಲ್ಲೇ ಇರಬೇಕು. ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಮತ್ತು ಪ್ರಯಾಣದ ಸಮಯ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಐಡಿ ಕಾರ್ಡ್ ಪ್ರದರ್ಶನಕ್ಕೆ ಇಲ್ಲ ಅವಕಾಶ: ಈ ಹಿಂದೆ ಅನೇಕರು ತಮ್ಮ ಅಧಿಕೃತ ಗುರುತಿನ ಚೀಟಿಗಳನ್ನು (ID Cards) ತೋರಿಸಿ ಟೋಲ್ ವಿನಾಯಿತಿ ಪಡೆಯುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶವಿಲ್ಲ. ವಿನಾಯಿತಿ ಪಡೆಯಲು ಅರ್ಹರಿರುವವರು ಕಡ್ಡಾಯವಾಗಿ ‘ಎಕ್ಸಂಪ್ಟೆಡ್ ಫಾಸ್ಟ್‌ಟ್ಯಾಗ್’ (Exempted FASTag) ಹೊಂದಿರಲೇಬೇಕು.

ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ದಂಡ: ನಿಮ್ಮ ವಾಹನಕ್ಕೆ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಅಥವಾ ಅದು ಕೆಲಸ ಮಾಡದಿದ್ದರೆ, ನೀವು UPI ಮೂಲಕ ಹಣ ಪಾವತಿಸಬಹುದು. ಆದರೆ, ಸಾಮಾನ್ಯ ದರಕ್ಕಿಂತ 1.25 ಪಟ್ಟು ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.

ಒಂದು ವೇಳೆ ಟೋಲ್ ಪಾವತಿಸದೆ ಮುಂದೆ ಹೋದರೆ ಅಂತಹ ವಾಹನಗಳಿಗೆ ಇ-ನೋಟಿಸ್ ಕಳುಹಿಸಲಾಗುತ್ತದೆ. 3 ದಿನಗಳ ಒಳಗಾಗಿ ಬಾಕಿ ಪಾವತಿಸದಿದ್ದರೆ ದಂಡದ ಮೊತ್ತವು ಎರಡರಷ್ಟಾಗುತ್ತದೆ.

LEAVE A REPLY

Please enter your comment!
Please enter your name here