ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ತಿಕ್ ಆಚಾರ್, ತಂದೆ, ವೆಂಕಟರಮಣ ಅಚಾರ್, ವಾಸ: ಮನೆ ನಂಬ್ರ 2/37, ಕಾರ್ತಿಕ ನಿಲಯ, ಹೊಸಿಮನೆ, ಇಡೂರು ಕುಂಜ್ಞಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಎಂಬುವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ ರವರು ದಿನಾಂಕ 09-04-2026 ರಂದು ಗಡಿಪಾರು ಆದೇಶ ಹೊರಡಿಸಿರುತ್ತಾರೆ.
ಈತನ ವಿರುದ್ಧ 4 ಪ್ರಕರಣ ದಾಖಲಾಗಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿರುತ್ತದೆ. ಈತನನ್ನು ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

