ಶ್ರೀ ಮಹಾವೀರಕಾಲೇಜು ಮೂಡುಬಿದಿರೆಯ ವಿದ್ಯಾರ್ಥಿನಿ ವಿಕ್ರೀತಾಗೆ ರಾಷ್ಟ್ರ ಮಟ್ಟದ ಫ್ಲೋರ್‌ಬಾಲ್‌ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ

0
15

ಮೂಡುಬಿದಿರೆ : ಮಹಾರಾಷ್ಟ್ರದ ಬಲ್ಹಾರಷ್‌ನಲ್ಲಿ ಏಪ್ರಿಲ್ 2 ರಿಂದ 5ರ ವರೆಗೆ ನಡೆದ 2025-26ನೇ ಸಾಲಿನ ಸೀನಿಯರ್ ವಿಭಾಗದ ರಾಷ್ಟ್ರಮಟ್ಟದ 19ನೇ ಫ್ಲೋರ್‌ ಬಾಲ್‌ ಚಾಂಪಿಯನ್‌ ಷಿಪ್‌ನಲ್ಲಿ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ಕು. ವಿಕ್ರೀತಾ ಇವರನ್ನು ಒಳಗೊಂಡ ಕರ್ನಾಟಕ ತಂಡವು ಕಂಚಿನ ಪದಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತದೆ.

ದಿ. ಹರೀಶ್ ಪೂಜಾರಿ ಮತ್ತು ರಾಜೀವಿ ಇವರ ಹೆಮ್ಮೆಯ ಮಗಳು ವಿಕ್ರೀತಾ ತಮ್ಮ ಪದವಿಪೂರ್ವ ಶಿಕ್ಷಣದ ಸಮಯದಲ್ಲಿಯೇ ಫ್ಲೋರ್ ಬಾಲ್‌ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಇವರಿಗೆ ನವೀನ್ ಎಂ ಹೆಗ್ಡೆ ಫ್ಲೋರ್ ಬಾಲ್‌ ಕ್ರೀಡಾ ತರಬೇತಿ ನೀಡಿದ್ದಾರೆ.

ವಿಕ್ರೀತಾ ಈ ಹಿಂದೆ 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಹಾರದ ಜಹ್ಫಾನ್ ಮುಜಫರ್‌ ಪುರ ದತ್ರಿಹುಟ್‌ ಕಾಲೇಜ್‌ಆಫ್ ಫಿಸಿಕಲ್ ಎಜುಕೇಶನ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಫ್ಲೋರ್ ಬಾಲ್‌ ಟೂರ್ನಮೆಂಟಿನಲ್ಲಿ ತೃತೀಯ ಸ್ಥಾನದೊಂದಿಗೆ ಅತ್ಯುತ್ತಮ ರಕ್ಷಣಾ ಆಟಗಾರ್ತಿ ಎಂಬ ವೈಯಕ್ತಿಕ ಬಹುಮಾನವನ್ನೂ ಪಡೆದಿದ್ದರು.

ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್‌ರೈ, ಅಧ್ಯಾಪಕ-ಅಧ್ಯಾಪಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here