ವರ್ಲ್‌‌ಪೂಲ್‌ ಹೊಸ ಶ್ರೇಣಿಗಳ ಬಿಡುಗಡೆ

0
6

ಮಂಗಳೂರು : ಗೃಹೋಪಯೋಗಿ ವಸ್ತುಗಳ ತಯಾರಿಕೆಯ ಮುಂಚೂಣಿಯಲ್ಲಿರುವ ವರ್ಲ್‌ಪೂಲ್ ಆಫ್ ಇಂಡಿಯಾ ಗ್ರಾಹಕರು ಎದುರಿಸುತ್ತಿರುವ ಮ್ಯಾನುವಲ್ ಡಿಫ್ರಾಸ್ಟಿಂಗ್‌ ಕಿರಿಕಿರಿಯನ್ನು ತಪ್ಪಿಸಲು ವಿನ್ಯಾಸಗೊಳಿಸಲಾದ ಸಿಂಗಲ್-ಡೋರ್ ವಿಭಾಗದ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ತನ್ನ ವಿಟಾಮ್ಯಾಜಿಕ್-ಪ್ರೊ ಮತ್ತು ಇಂಪ್ರೋ ಪ್ಲಸ್  ಶ್ರೇಣಿಗಳ ಪರಿಚಯದೊಂದಿಗೆ, ವರ್ಲ್‌ಪೂಲ್ ಸಿಂಗಲ್‌ ಡೋರ್ ವಿಭಾಗದಲ್ಲಿ ಅತಿ ದೊಡ್ಡ ಆಟೋಮ್ಯಾಟಿಕ್ ಡಿಫ್ರಾಸ್ಟ್ ರೆಫ್ರಿಜರೇಟರ್‌ಗಳ ಶ್ರೇಣಿಯನ್ನು ಮಾರುಕಟ್ಟೆಗೆ ತಂದಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲ ಮತ್ತು ಒತ್ತಡ ಮುಕ್ತ ರೆಫ್ರಿಜರೇಷನ್ ಅನುಭವ ನೀಡುತ್ತಿದೆ.

ಹೆಚ್ಚಿನ ಸಿಂಗಲ್-ಡೋರ್ ಫ್ರಿಡ್ಜ್ ಬಳಕೆದಾರರಿಗೆ, ಫ್ರೀಜರ್‌ನಲ್ಲಿ ಹೆಪ್ಪುಗಟ್ಟಿದ ಮಂಜುಗಡ್ಡೆಯನ್ನು ತೆಗೆಯುವುದು ಶ್ರಮದಾಯಕ ಮತ್ತು ಬೇಸರದ ಕೆಲಸವಾಗಿದೆ. ಮ್ಯಾನುವಲ್ ಡಿಫ್ರಾಸ್ಟಿಂಗ್‌ಗಾಗಿ ಫ್ರಿಡ್ಜ್ ಆಫ್ ಮಾಡುವುದು, ಒಳಗಿರುವ ವಸ್ತುಗಳನ್ನು ಖಾಲಿ ಮಾಡುವುದು, ಮಂಜುಗಡ್ಡೆ ಕರಗುವವರೆಗೆ ಕಾಯುವುದು ಮತ್ತು ನೀರು ಚೆಲ್ಲುವುದನ್ನು ಸ್ವಚ್ಛಗೊಳಿಸ ಬೇಕಾಗುತ್ತದೆ.

ಇದು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಮತ್ತು ದೈನಂದಿನ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಬೇಸಿಗೆಯಂತಹ ಹೆಚ್ಚು ಬಳಕೆಯ ಸಮಯದಲ್ಲಿ, ಈ ಅನಾನುಕೂಲತೆ ಪದೇ ಪದೇ ಎದುರಾಗಿ, ದೈನಂದಿನ ಮನೆಕೆಲಸಗಳ ಟೆನ್ಶನ್ ಮತ್ತಷ್ಟು ಹೆಚ್ಚಿಸುತ್ತದೆ. ಸಮಸ್ಯೆಗೆ ಪರಿಹಾರವಾಗಿ ವರ್ಲ್‌ಪೂಲ್‌ ಸಂಪೂರ್ಣವಾಗಿ ತೊಂದರೆ ಇಲ್ಲದೆ ಆಟೋಮ್ಯಾಟಿಕ್ ಡಿಫ್ರಾಸ್ಟಿಂಗ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ಉಪಾಧ್ಯಕ್ಷ ನಕುಲ್ ತಿವಾರಿ ತಿಳಿಸಿದರು.

LEAVE A REPLY

Please enter your comment!
Please enter your name here