ಬಂಟ್ವಾಳ : ಇಲ್ಲಿನ ಪಂಜಿಕಲ್ಲು ಗ್ರಾಮದ ಗಂಪದಡ್ಡ ನಿವಾಸಿ, ಹಿರಿಯ ಪ್ರಗತಿಪರ ಕೃಷಿಕ ಐತಪ್ಪ ಗೌಡ ಗಂಪದಡ್ಡ (80) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಹಿರಿಯ ಪ್ರಗತಿಪರ ಕೃಷಿಕರಾಗಿ, ಹೈನುಗಾರರಾಗಿ, ಏಲಕ್ಕಿ ಬೆಳೆ ಬಗ್ಗೆ ವಿಶೇಷ ಪರಿಣತಿ ಹೊಂದಿದ್ದರು. ವಿವಿಧ ಸಾಮಾಜಿಕ ಮತ್ತು ಧಾಮರ್ಿಕ ಚಟುವಟಿಕೆಯಲ್ಲಿ ಗುರುತಿಕೊಂಡಿದ್ದು, ಕಳೆದ 10 ವರ್ಷಗಳಿಂದ ರಾಯಿ ಸಮೀಪದ ಕಾರಂಬಡೆ ಎಂಬಲ್ಲಿ ಅಡಿಕೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಪಂಜಿಕಲ್ಲು ಗ್ರಾಮದ ಗಂಪದಡ್ಡ ಸ್ವಗೃಹ ಬಳಿ ಶುಕ್ರವಾರ ಸಂಜೆ ನೆರವೇರಿತು.

