ಅಳಿಕೆ ಗ್ರಾಮದ ಮುಳಿಯ ಅಂಗನವಾಡಿ ಕೇಂದ್ರಕ್ಕೆ ಸಣ್ಣಗುತ್ತು ಮನೆಯ ಹಿರಿಯರಾದ ಬಾಲಕೃಷ್ಣ ಪೂಜಾರಿ ಅವರು ತಮ್ಮ ಕುಟುಂಬದ ದಿವಂಗತ ಹಿರಿಯರಾದ ಚೆನ್ನಪ್ಪ ಪೂಜಾರಿ ಹಾಗೂ ಶಿವಮ್ಮ ಅವರ ಸ್ಮರಣಾರ್ಥವಾಗಿ ಧ್ವಜಸ್ತಂಭವನ್ನು ಕೊಡುಗೆಯಾಗಿ ನೀಡಿದರು.
ಸಮಾಜಮುಖಿ ಕಾರ್ಯದ ಮೂಲಕ ಹಿರಿಯರ ಸ್ಮರಣೆಯನ್ನು ಶಾಶ್ವತಗೊಳಿಸಿರುವ ಬಾಲಕೃಷ್ಣ ಪೂಜಾರಿ ಅವರ ಸೇವೆಗೆ ಸಣ್ಣಗುತ್ತು ಕುಟುಂಬ ಹಾಗೂ ಅಳಿಕೆ ಗ್ರಾಮದ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ನೀಡಿದ ಈ ಕೊಡುಗೆ ಶ್ಲಾಘನೀಯವಾಗಿದೆ.

