ಪ್ರೀಯಕರನ ಜೊತೆ ವಿವಾಹವಾಗಲು ಹೆತ್ತವರಿಗೆ ವಿಷ ಉಣಿಸಿದ ಮಗಳು..!

0
118

ಮರೆನಾ : ಅಪ್ರಾಪ್ತ ಬಾಲಕಿಯೊಬ್ಬಳು ಪ್ರೀಯಕರನ ಜೊತೆ ವಿವಾಹವಾಗಲು ತನ್ನ ಹೆತ್ತವರಿಗೆ ವಿಷ ಉಣಿಸಿರುವ ಘಟನೆ ಮಧ್ಯಪ್ರದೇಶದ ಮರೆನಾದಲ್ಲಿ ಸಂಭವಿಸಿದೆ. ಚಪಾತಿಯಲ್ಲಿ ಇಲಿ ಪಾಷಾಣ ಬೆರೆಸಿ ಪೋಷಕರಿಗೆ ನೀಡಿರುವ ಘಟನೆ ನಡೆದಿದೆ. ಮೊರೆನಾ ಜಿಲ್ಲೆಯ ಪೋರ್ಸಾ ಎಂಬಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಗೆಳೆಯನ ಜೊತೆ ಸೇರಿ ತಂದೆ-ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ತನ್ನ ಪ್ರೇಮಕ್ಕೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೋ ಏನೋ, ಈ ಬಾಲಕಿ ತನ್ನ ಗೆಳೆಯ ಸುದಾಮನ ಜೊತೆ ಸೇರಿ ಕ್ರೂರ ಯೋಜನೆಯೊಂದನ್ನು ರೂಪಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ತಾನೇ ಅಡುಗೆ ಮಾಡುವ ಜವಾಬ್ದಾರಿ ವಹಿಸಿಕೊಂಡ ಬಾಲಕಿ, ಚಪಾತಿಯ ಹಿಟ್ಟಿನಲ್ಲಿ ಇಲಿ ವಿಷವನ್ನು ಬೆರೆಸಿದ್ದಾಳೆ. ಇದನ್ನು ತಿಂದ ತಾಯಿ ಮಿಥಿಲೇಶ್ ಮತ್ತು ತಂದೆ ಗಬ್ಬರ್ ಪ್ರಜಾಪತಿ ಅವರ ಆರೋಗ್ಯ ತಕ್ಷಣವೇ ಹದಗೆಟ್ಟಿದೆ. ಸದ್ಯ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದ್ದು, ಮೊರೆನಾದಿಂದ ಗ್ವಾಲಿಯರ್‌ನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.

ಈ ಪ್ರಕರಣವು ಆರಂಭದಲ್ಲಿ ಕೇವಲ ಫುಡ್​ಪಾಯ್ಸನ್​ನಂತೆ ತೋರಿತ್ತು. ಆದರೆ ಪೊಲೀಸರಿಗೆ ಸಿಕ್ಕ ಒಂದು ಆಡಿಯೋ ಕ್ಲಿಪ್ ಇಡೀ ಕಥೆಯನ್ನೇ ಬದಲಿಸಿದೆ.

ಪೋಷಕರಾದ ಮಿಥಿಲೇಶ್ ಮತ್ತು ಗಬ್ಬರ್ ಪ್ರಜಾಪತಿ ಅವರು ಪ್ರಾಣಾಪಾಯದಿಂದ ಪಾರಾದ ನಂತರ ಪೋರ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಡಿಯೋ ಸಾಕ್ಷ್ಯ ಮತ್ತು ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಅಪ್ರಾಪ್ತ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here