ವಿದ್ಯಾರ್ಥಿನಿಯರಿಗೆ ಸ್ಕಾಲರ್‍ಶಿಪ್

0
3

ಮಂಗಳೂರು: ಅಜೀಂ ಪ್ರೇಮ್‍ಜಿ ಫೌಂಡೇಷನ್ ಇಂದು ಬಾಲಕಿಯರಿಗಾಗಿ ಅಜೀಂ ಪ್ರೇಮ್‍ಜಿ ಸ್ಕಾಲರ್‍ಶಿಪ್ ಯೋಜನೆಯನ್ನು ಘೋಷಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‍ಲೈನ್ ಮತ್ತು ಉಚಿತವಾಗಿದೆ. ಅರ್ಜಿಗಳನ್ನು ಅಜೀಂ ಪ್ರೇಮ್‍ಜಿ ಫೌಂಡೇಷನ್‍ನ ಅಧಿಕೃತ ವೆಬ್‍ಸೈಟ್ ಮೂಲಕ ಮಾತ್ರ ಸಲ್ಲಿಸಬಹುದು.

ಎರಡು ವರ್ಷ ಹಿಂದೆ ಆರಂಭವಾದ ಈ ಸ್ಕಾಲರ್‍ಶಿಪ್ ಯೋಜನೆಯು ಈಗ ಕರ್ನಾಟಕ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಾಲಕಿಯರಿಗೆ ಲಭ್ಯವಿದೆ ಎಂದು ಅಜೀಂ ಪ್ರೇಮ್‍ಜಿ ಫೌಂಡೇಷನ್ ನ ಸಿಇಒ ಅನುರಾಗ್ ಬೆಹರ್ ಹೇಳಿದ್ದಾರೆ.

ಪ್ರತಿ ವರ್ಷ 5 ಲಕ್ಷ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದು, ಈ ವರ್ಷ ಹೊಸದಾಗಿ ದೆಹಲಿಯ 20,000 ಬಾಲಕಿಯರಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ಸ್ಕಾಲರ್‍ಶಿಪ್ ನೀಡಲಾಗುತ್ತದೆ. ಈ ಸ್ಕಾಲರ್‍ಶಿಪ್‍ಗೆ ಅರ್ಹರಾಗಲು ವಿದ್ಯಾರ್ಥಿನಿಯು ಈ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯಲ್ಲಿ 10 ಮತ್ತು 12ನೇ ತರಗತಿಗಳನ್ನು ಪೂರ್ಣಗೊಳಿಸಿರಬೇಕು. ಅಲ್ಲದೆ, ಭಾರತದಲ್ಲಿರುವ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಅಥವಾ ಡಿಪೆÇ್ಲಮಾ ಕೋರ್ಸ್‍ನ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು.

ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಕಾಲೇಜಿನ ಮೊದಲ ವರ್ಷದಿಂದ ಪದವಿ ಅಥವಾ ಡಿಪೆÇ್ಲಮಾ ಶಿಕ್ಷಣ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ 30 ಸಾವಿರ ರೂಪಾಯಿನಂತೆ ಗರಿಷ್ಠ 1.5 ಲಕ್ಷ ರೂಪಾಯಿ ಸ್ಕಾಲರ್‍ಶಿಪ್ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.