ಮುಂಬೈ, ಏಪ್ರಿಲ್ 13, 2026: ಬ್ಯಾಂಕ್ ಆಫ್ ಬರೋಡಾ ಮತ್ತು ರಿಲಯನ್ಸ್ ಜಿಯೋದಿಂದ ಮಂಗಳವಾರ ವಿಶೇಷವಾಗಿ ಆರಂಭಿಕ ಹಂತದ ಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾದ, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಬಿಒಬಿ ವರ್ಲ್ಡ್ ಲೈಟ್ (bob world lite) ಅನ್ನು ಜಿಯೋಫೋನ್ ಪ್ರೈಮಾ 4ಜಿ ಸಾಧನದಲ್ಲಿ ಬಿಡುಗಡೆ ಮಾಡಲು ಪಾಲುದಾರಿಕೆ ಘೋಷಿಸಿವೆ. ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಡಿಜಿಟಲ್ ಪಾವತಿಗಳು ತಲುಪುವಂತೆ ಮಾಡುವ ಭಾರತೀಯ ರಿಸರ್ವ್ ಬ್ಯಾಂಕ್ನ 2021ರ ಉದಾತ್ತ ದೃಷ್ಟಿಗೆ ಅನುಗುಣವಾಗಿ, ಈ ಉದ್ಯಮ-ಮೊದಲ ಉಪಕ್ರಮವು ಜಾರಿಗೆ ಬರಲಿದೆ. ಆ ಮೂಲಕ ದೇಶಾದ್ಯಂತ ಲಕ್ಷಾಂತರ ಆರಂಭಿಕ ಹಂತದ ಫೋನ್ ಬಳಕೆದಾರರಿಗೆ ತಡೆರಹಿತ ಡಿಜಿಟಲ್ ಬ್ಯಾಂಕಿಂಗ್ ಸಂಪರ್ಕವನ್ನು ದೊರಕಿಸುತ್ತದೆ. ಅಸ್ತಿತ್ವದಲ್ಲಿ ಇರುವ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಮತ್ತು ಯಾವುದೇ ಇತರ ಬ್ಯಾಂಕಿನ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಸ್ವಯಂ-ಆನ್ಬೋರ್ಡಿಂಗ್ ಪ್ರಕ್ರಿಯೆಯ ಮೂಲಕ ಈ ಅಪ್ಲಿಕೇಷನ್ ಲಭ್ಯ ಇರುತ್ತದೆ.
ಸ್ಮಾರ್ಟ್ಫೋನ್ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುವ ಸಾಂಪ್ರದಾಯಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ಗಳಿಗಿಂತ ಭಿನ್ನವಾಗಿ, ಕೈಗೆಟುಕುವ ಸ್ಮಾರ್ಟ್ ಫೀಚರ್ ಫೋನ್ಗಳಲ್ಲಿ ದೈನಂದಿನ ಬ್ಯಾಂಕಿಂಗ್ ಸೇವೆಗಳ ಸಮಗ್ರ ಸೂಟ್ ಅನ್ನು ಒದಗಿಸಲು ಬಿಒಬಿ ವರ್ಲ್ಡ್ ಲೈಟ್ ಅಪ್ಲಿಕೇಷನ್ ಅನ್ನು ರೂಪಿಸಲಾಗಿದೆ. ಇದು ಹಗುರವಾದ, ಕಡಿಮೆ ಬ್ಯಾಂಡ್ವಿಡ್ತ್ ಆರ್ಕಿಟೆಕ್ಚರ್ ಹೊಂದಿದ್ದು, ಸುಗಮ ಕೀಪ್ಯಾಡ್ ನ್ಯಾವಿಗೇಷನ್ ಮತ್ತು ಸುರಕ್ಷಿತ ಸಂಪರ್ಕವನ್ನು ಹೊಂದಿದೆ. ಇದು ಡಿಜಿಟಲ್ ಬ್ಯಾಂಕಿಂಗ್ ಅನ್ನು ಸರಳ, ತಡೆರಹಿತ ಮತ್ತು ಎಲ್ಲರಿಗೂ ದೊರೆಯುವಂತೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ದೂರದ ಮತ್ತು ಕಡಿಮೆ ಸೇವೆ ಇರುವಂಥ ಪ್ರದೇಶಗಳಲ್ಲಿ ದೊರೆಯುವಂತೆ ಮಾಡುವ ಗುರಿ ಇದೆ.
ಬಿಒಬಿ ವರ್ಲ್ಡ್ ಲೈಟ್ ಯುಪಿಐ-ಸಕ್ರಿಯಗೊಳಿಸಿದ ಸ್ಕ್ಯಾನ್ ಮತ್ತು ಪಾವತಿ ಹಾಗೂ ಹಣ ಕಳುಹಿಸುವುದು, ಬಿಲ್ ಪಾವತಿಗಳು ಮತ್ತು ರೀಚಾರ್ಜ್ಗಳು, ಪ್ರೊಫೈಲ್ ಅನ್ನು ನಿರ್ವಹಿಸುವುದು ಹಾಗೂ ಮುಂದೆ, ಠೇವಣಿಗಳ ಆರಂಭ, ಸಾಲಗಳಿಗೆ ಅರ್ಜಿ ಸಲ್ಲಿಸುವುದು, ಫಂಡ್ ವರ್ಗಾವಣೆಗಳು (IMPS), ಖಾತೆ ಅನಾಲಿಸಿಸ್, ಪಾಸ್ಬುಕ್ ಮುಂತಾದ ಹೆಚ್ಚುವರಿ ಕಾರ್ಯಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಪಾಲುದಾರಿಕೆ ಅಡಿಯಲ್ಲಿ, ಅಪ್ಲಿಕೇಷನ್ ಜಿಯೋಫೋನ್ ಪ್ರೈಮಾ 4ಜಿ ಸಾಧನಗಳಲ್ಲಿ ಮೊದಲೇ ಲೋಡ್ ಆಗುತ್ತದೆ ಹಾಗೂ ಹೋಮ್ ಸ್ಕ್ರೀನ್ ನಿಂದ ನೇರವಾಗಿ ಸಂಪರ್ಕಿಸಬಹುದು. ಅಸ್ತಿತ್ವದಲ್ಲಿರುವ ಜಿಯೋಫೋನ್ ಪ್ರೈಮಾ 4ಜಿ ಸಾಧನ ಬಳಕೆದಾರರು ಜಿಯೋಸ್ಟೋರ್ನಿಂದ ಬಿಒಬಿ ವರ್ಲ್ಡ್ ಲೈಟ್ ಅಪ್ಲಿಕೇಷನ್ ಅನ್ನು ಸಂಪರ್ಕಿಸಬಹುದು.
ಈ ಪಾಲುದಾರಿಕೆ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್, “ಬ್ಯಾಂಕ್ ಆಫ್ ಬರೋಡಾದಲ್ಲಿ ಡಿಜಿಟಲ್ ಸೇರ್ಪಡೆಗೆ ಚಾಲನೆ ನೀಡುವುದು ನಮಗೆ ಪ್ರಮುಖ ಆದ್ಯತೆಯಾಗಿದೆ. ಸದ್ಯಕ್ಕೆ, ಬಿಒಬಿ ವರ್ಲ್ಡ್ ಮೊಬೈಲ್ ಬ್ಯಾಂಕಿಂಗ್ ರೀಟೇಲ್ ಗ್ರಾಹಕರ ಅಗತ್ಯವನ್ನು ಪೂರೈಸುತ್ತದೆ ಮತ್ತು ಬಿಒಬಿ ವರ್ಲ್ಡ್ ವ್ಯವಹಾರವು ವ್ಯಾಪಾರಿಗಳು, ಎಸ್ಎಂಇ ಹಾಗೂ ಕಾರ್ಪೊರೇಟ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಬಿಒಬಿ ವರ್ಲ್ಡ್ ಲೈಟ್ ಅನ್ನು ಪ್ರಾರಂಭಿಸಲು ಜಿಯೋ ಜೊತೆಗಿನ ನಮ್ಮ ಪಾಲುದಾರಿಕೆಯು ಸ್ಮಾರ್ಟ್ಫೋನ್ ಪರಿಸರ ವ್ಯವಸ್ಥೆಯನ್ನು ಮೀರಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ವಿಸ್ತರಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದಲ್ಲಿ ಸ್ಮಾರ್ಟ್ ಫೀಚರ್ ಫೋನ್ ಬಳಕೆದಾರರ ದೊಡ್ಡ ಮತ್ತು ಬೆಳೆಯುತ್ತಿರುವ ನೆಲೆಯೊಂದಿಗೆ, ಈ ಉಪಕ್ರಮವು ಸರಳ, ಸುರಕ್ಷಿತ ಮತ್ತು ಯಾವುದೇ ಸಮಯದಲ್ಲಿ ಬ್ಯಾಂಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ ಹಾಗೂ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಉಪಕ್ರಮವು ನಾವು ವ್ಯಾಪಕವಾದ ಗ್ರಾಹಕ ನೆಲೆಯನ್ನು ತಲುಪಲು ಮತ್ತು ತೊಡಗಿಸಿಕೊಳ್ಳಲು ಅವಕಾಶಗಳನ್ನು ತೆರೆಯುತ್ತದೆ, ಇದು ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ,” ಎಂದರು.
ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಸುನಿಲ್ ದತ್ ಮಾತನಾಡಿ, “ಜಿಯೋದಲ್ಲಿ, ನಾವು ಯಾವಾಗಲೂ ಪ್ರತಿ ಭಾರತೀಯರಿಗೂ ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವತ್ತ ಗಮನಹರಿಸಿದ್ದೇವೆ, ಅದು ದೊಡ್ಡ ಪ್ರಮಾಣದಲ್ಲಿ ಮತ್ತು ಕೈಗೆಟುಕುವ ದರದಲ್ಲಿ. ಜಿಯೋಫೋನ್ ಆ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಕೇಂದ್ರಬಿಂದುವಾಗಿದೆ, ಭಾರತದಾದ್ಯಂತ ಲಕ್ಷಾಂತರ ಬಳಕೆದಾರರ ಕೈಯಲ್ಲಿ ಕೈಗೆಟುಕುವ ಸಾಧನಗಳು ಮತ್ತು ಡಿಜಿಟಲ್ ಸೇವೆಗಳನ್ನು ನೀಡುತ್ತದೆ ಮತ್ತು ಡಿಜಿಟಲ್ ಡೆಮಾಕ್ರಸಿ ಮತ್ತು ಸೇರ್ಪಡೆಗೆ ಪ್ರಬಲ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಈ ದಿನ ಬ್ಯಾಂಕ್ ಆಫ್ ಬರೋಡಾದೊಂದಿಗಿನ ನಮ್ಮ ಪಾಲುದಾರಿಕೆಯು ಆ ಪ್ರಯಾಣದ ಮುಂದಿನ ಹೆಜ್ಜೆಯನ್ನು ಗುರುತಿಸುತ್ತದೆ. ಲಕ್ಷಾಂತರ ಬಳಕೆದಾರರಿಗೆ ಮಿತಿಯಿಲ್ಲದ ಡಿಜಿಟಲ್ ಬ್ಯಾಂಕಿಂಗ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ನಾವು ದೇಶಾದ್ಯಂತ ಜಿಯೋಫೋನ್ ಬಳಕೆದಾರರಿಗೆ ಸಂಪೂರ್ಣ ವೈಶಿಷ್ಟ್ಯಪೂರ್ಣ ಬ್ಯಾಂಕಿಂಗ್ ಅನ್ನು ಸರಾಗವಾಗಿ, ಸುರಕ್ಷಿತವಾಗಿ ಮತ್ತು ಅವರ ಅಗತ್ಯಗಳಿಗೆ ಪೂರಕವಾಗಿ ರೂಪಿಸಲಾದ ರೀತಿಯಲ್ಲಿ ತರುತ್ತಿದ್ದೇವೆ,” ಎಂದು ಹೇಳಿದರು.

![[l-r] Dr. Debadatta Chand, MD & CEO, Bank of Baroda and Dr. (Hon.) Sunil Dutt, President, Reliance Jio Infocomm Limited launch the bob World Lite mobile app on the JioPhone Prima 4G device.jpg](https://tulunaduvarthe.com/wp-content/uploads/2026/04/l-r-Dr.-Debadatta-Chand-MD-CEO-Bank-of-Baroda-and-Dr.-Hon.-Sunil-Dutt-President-Reliance-Jio-Infocomm-Limited-launch-the-bob-World-Lite-mobile-app-on-the-JioPhone-Prima-4G-device.jpg-696x750.webp)