ಕಾಸರಗೋಡು : ಬೇಸಿಗೆ ರಜೆಗಳಲ್ಲಿ ಮಕ್ಕಳಿಗೆ ಸಾಹಿತ್ಯ ಶಿಬಿರ : ಏಪ್ರಿಲ್ 29ರಿಂದ ಮೇ 2ರವರೆಗೆ (ಏ.20 ಪ್ರತಿನಿಧಿಗಳ ಹೆಸರು ನೋಂದಣಿಗೆ ಕೊನೆಯ ದಿನ )

0
10

ವಿಶ್ವದಲ್ಲೇ ಪ್ರಪ್ರಥಮವಾಗಿ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಸ್ಥಾಪಿತವಾದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಚನ್ನರಾಯಪಟ್ಟಣದ ರಾಷ್ಟ್ರೀಯ ಪರಿಸರ ತಜ್ಞ ಸಿ.ಎನ್.ಅಶೋಕ ಅವರ ಸಾರಥ್ಯದಲ್ಲಿ ಕಳೆದ 15 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ರಾಷ್ಟ್ರ,ರಾಜ್ಯ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಅದರ ಪ್ರದಾನ ವೇದಿಕೆಯಲ್ಲಿ ಮಕ್ಕಳಿಗೆ ಕಲ್ಪಿಸುವ ಮೂಲಕ ಪ್ರತಿಭಾ ಅನಾವರಣಕ್ಕೆ ಅವಕಾಶವನ್ನು ಒದಗಿಸುತ್ತಾ ಬಂದಿರುತ್ತದೆ.

ವಿಶ್ವಮಟ್ಟದಲ್ಲಿ ಅಸಂಖ್ಯಾತ ಪ್ರತಿಭಾವಂತ ಮಕ್ಕಳಿದ್ದು ಆ ಮಕ್ಕಳನ್ನು ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ,ಸಾಂಸ್ಕೃತಿಕ, ಪರಿಸರ, ಸಂಸ್ಕೃತಿ ಇತಿಹಾಸವನ್ನು ಜನ ಮಾನಸದ ಮಕ್ಕಳ ಮೂಲಕ ಮುಖ್ಯ ವಾಹಿನಿಗೆ ತಲುಪಿಸಿ ತರುವ ಮತ್ತೊಂದು ಮಹತ್ತರವಾದ ಕಾರ್ಯ ಯೋಜನೆಗಳನ್ನು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೈಗೊಂಡಿರುತ್ತದೆ.

ರಾಷ್ಟ್ರ,ರಾಜ್ಯ, ಗಡಿನಾಡು, ಹೊರನಾಡು, ಹಾಗೂ ಹೊರ ರಾಷ್ಟ್ರಗಳನ್ನು ಕೇಂದ್ರೀಕರಿಸಿ ಕಾರ್ಯ ವೆಸಗುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇದರ ಮುಖವಾಣಿಯಾಗಿ “ಮಕ್ಕಳ ನುಡಿಸಿರಿ” ಕನ್ನಡ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲು ಸಂಪಾದಕೀಯ ಮಂಡಳಿ ಕಾರ್ಯ ಪ್ರವೃತ್ತವಾಗಿದೆ.

ಮಕ್ಕಳಿಗಾಗಿ ಕರ್ನಾಟಕ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರ :- ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯು ರಾಷ್ಟ್ರ,ರಾಜ್ಯ,ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿರುವ ಕರ್ನಾಟಕ ಹಾಗೂ ಹೊರ ರಾಜ್ಯದ ಹೈಸ್ಕೂಲು ಮಟ್ಟದವರೆಗಿನ (5 ರಿಂದ 18 ವರ್ಷದ ಒಳಗಿನ) ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ,ಶಿಕ್ಷಣ,ಸಾಂಸ್ಕೃತಿಕ, ಪರಿಸರ,ಸಂಸ್ಕೃತಿ, ಇತಿಹಾಸವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ಮಟ್ಟದ ಬೇಸಿಗೆ ಸಾಹಿತ್ಯ ಶಿಬಿರವನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಸಿದ್ದರ ಬೆಟ್ಟದ (ಸೂರ್ಯನ ಗುಹೆ, ಸಂಜೀವಿನಿ ಬೆಟ್ಟ )ತಪ್ಪಲಿನಲ್ಲಿ 2026 ಏಪ್ರಿಲ್ 29 ರಿಂದ ಮೇ 2 ರವರೆಗೆ ಏರ್ಪಡಿಸಿರುತ್ತದೆ.

ಈ ನಾಲ್ಕು ದಿನಗಳ ಕಾಲ ಮಕ್ಕಳಿಗೆ ಉಚಿತವಾಗಿ ಊಟೋಪಚಾರ,ವಸತಿ, ವ್ಯವಸ್ಥೆ, ಪ್ರಮುಖ ಪ್ರವಾಸಿ ಕೇಂದ್ರಗಳ ಸಂದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ನಿರ್ದೇಶನದಂತೆ, ಕ.ರಾ.ಮ. ಸಾ.ಪ ಕೇರಳ ರಾಜ್ಯ ಘಟಕ ಇದರ ವತಿಯಿಂದ ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ, ಶಿಕ್ಷಣ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ಕೋರಲಾಗಿದೆ.ಇವರಲ್ಲಿ ಓರ್ವ ವಿದ್ಯಾರ್ಥಿಗೆ ಉದ್ಘಾಟನಾ ಸಮಾರಂಭದ ಪ್ರಧಾನ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿ, ಭಾಷಣ ಮಾಡಲು ಅವಕಾಶ ನೀಡಲಾಗಿದೆ. ಇತರ 14 ಮಂದಿ ವಿದ್ಯಾರ್ಥಿಗಳು ವಿಶೇಷ ಪ್ರತಿನಿಧಿಯಾಗಿ ಭಾಗವಹಿಸುವ ಗೌರವ ಸಿಗಲಿದೆ.

ಈ 15 ಮಕ್ಕಳ ಜತೆಗೆ ಹೆತ್ತವರು /ಪೋಷಕರು ಬರಬಹುದು. ಕಾಸರಗೋಡಿನಿಂದ ತುಮಕೂರಿಗೆ ಹೋಗಿ ಬರುವ ಬಸ್ಸು ಪ್ರಯಾಣ ವೆಚ್ಚವನ್ನು ತಾವೇ ವಹಿಸಬೇಕಾಗುತ್ತದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯ್ದ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಈ ಪ್ರಕಟಣೆಯನ್ನು ಆಯಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕಿರಿಯ, ಹಿರಿಯ, ಹೈಸ್ಕೂಲು ವಿಭಾಗದ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಅಥವಾ ವಿದ್ಯಾರ್ಥಿಗಳ ಹೆತ್ತವರು ರಾಜ್ಯಮಟ್ಟದ ಬೇಸಿಗೆ ಸಾಹಿತ್ಯ ಶಿಬಿರದಲ್ಲಿ ಭಾಗವಹಿಸುವಂತೆ ಸೂಚಿಸಲು ವಿನಂತಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳ ಹೆಸರು,ತಂದೆ ತಾಯಿಯ ಹೆಸರು,ಜನ್ಮ ದಿನಾಂಕ, ತಿಂಗಳು,ವರ್ಷ,ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ,ಒಂದು ಫೋಟೋ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಯ ಪರಿಚಯ ಪತ್ರ, ಮೊಬೈಲ್ ಸಂಖ್ಯೆಯನ್ನು ಬಿಳಿ ಕಾಗದದಲ್ಲಿ ಬರೆದು ವಾಟ್ಸ್ ಪ್ ಮೂಲಕ ಕಳುಹಿಸಬೇಕು ಪ್ರಥಮವಾಗಿ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿ ಸೂಚಿಸಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಶಾಲೆಗಳಿಗೆ ವಾರ್ಷಿಕ ರಜೆಯಾಗಿರುವುದರಿಂದ ಹೆಚ್ಚಿನ ಪ್ರಚಾರ ನೀಡಲು ವಿನಂತಿಸಲಾಗಿದೆ. ಶಿವರಾಮ ಕಾಸರಗೋಡು, ಅಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು,ಕೇರಳ ರಾಜ್ಯ ಘಟಕ,ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ, ಕಾಸರಗೋಡು -671121 ಮೊಬೈಲ್ :-9448572016 ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here