ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ-2026

0
50

ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು 2025 26 ನೇ ಸಾಲಿನ ವಿವಿಧ ಸ್ಪರ್ಧೆಗಳ ಹಾಗೂ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಗುಲಾಬಿ ಇವರ ಅಧ್ಯಕ್ಷತೆಯಲ್ಲಿ ಎಸ್ ಕೆ ಎಫ್ ಎಲಿಕ್ಸರ್ ನ ನಿರ್ದೇಶಕ ಪ್ರಜ್ವಲ್ ಆಚಾರ್ಯ ಇವರ ಯವರಾದ ಯುವ ಉದ್ಯಮಿ ಪ್ರಶಸ್ತಿ ವಿಜೇತ ರಾದ ಅನುಷಾ ಪ್ರಜ್ವಲ್ ಆಚಾರ್ಯ ಅವರು ವಿತರಿಸಿದರು ಕಾರ್ಯಕ್ರಮದಲ್ಲಿ ಸ್ಥಳೀಯರಾದ ವಿಜಯಲಕ್ಷ್ಮಿ ವಿ ಕಾಮತ್. ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಶೋಭಾ ಜೈನ್ ಮತ್ತು ವಾಸುದೇವ ಆಚಾರ್ಯ ಭಾಗವಹಿಸಿದ್ದರು ಏಳನೇ ತರಗತಿಯಿಂದ ಬೇರೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸುವುದರೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಬಹುಮಾನೊಂದಿಗೆ ಗೌರವಿಸಲಾಯಿತು.

ಮಧ್ಯಾಹ್ನ ಸಹಭೋಜನ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು ಶಾಲಾ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಬರುವ ಸತೀಶ್ ಮತ್ತು ನೃತ್ಯ ನಿರ್ದೇಶಕಿ ಕುಮಾರಿ ಕೃತಿಕ ಇವರನ್ನು ಗೌರವಿಸಲಾಯಿತು. ಗೌರವ ಶಿಕ್ಷಕರಾದ ಪ್ರತಿಭಾ ಮತ್ತು ಪ್ರಜ್ವಲ್ Shenoy ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ಕಸ್ತೂರಿ ಉಪಸ್ಥಿತರಿದ್ದರು. ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಪ್ರಸನ್ನ ವಿ ಶೆಣೈ ನಿರೂಪಿಸಿದರು.

LEAVE A REPLY

Please enter your comment!
Please enter your name here