ಮುಲ್ಕಿ: ಕಾರ್ನಾಡ್ ಬಳಿ ಕಟ್ಟಡದ ಆವರಣ ಗೋಡೆ ಕಾಮಗಾರಿಯಿಂದ ತೊಂದರೆ-ಶಾಸಕರಿಗೆ ದೂರು

0
35

ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಜಂಕ್ಷನ್ ಬಳಿ ಹಳೆ ಆಸ್ಪತ್ರೆಯ ಆವರಣ ಗೋಡೆ ಕೆಡವಿ ನೂತನವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಕಳೆದ ಒಂದು ತಿಂಗಳಿನಿಂದ ಕೆಡವಿಧ ಆವರಣ ಗೋಡೆಯ ಕಲ್ಲುಗಳನ್ನು ಹೆದ್ದಾರಿ ಬದಿ ರಾಶಿ ಹಾಕಿದ್ದು ವಾಹನ ಸವಾರರಿಗೆ, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ
ಕಾರ್ನಾಡ್ ಜಂಕ್ಷನ್ ಬಳಿ ಸದಾ ಜನನಿ ಬಿಡ ವಾಹನ ಸಂಚಾರವಿದ್ದು ವಾರದ ಸಂತೆ ಕೂಡ ನಡೆಯುತ್ತದೆ.


ಆವರಣ ಗೋಡೆ ನಿರ್ಮಾಣದ ನಿಧಾನ ಗತಿಯ ಕಾಮಗಾರಿಯಿಂದ ವಾರದ ಸಂತೆಗೆ ಬರುವ ಗ್ರಾಹಕರಿಗೆ, ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿದೆ. ವಾರದ ಸಂತೆಯ ದಿನ ದಿನವಿಡೀ ರಸ್ತೆ ತಡೆ ಉಂಟಾಗುತ್ತಿದ್ದು ಸಂಬಂಧಪಟ್ಟ ಗ್ರಾಹಕರು ಹಾಗೂ ವಾಹನ ಸವಾರರು ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜ್ಯ ಹೆದ್ದಾರಿ ಬದಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಗಮನಕ್ಕೆ ತಾರದೆ ಆಸ್ಪತ್ರೆಯ ಆಡಳಿತ ನೂತನ ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು ಸ್ಥಳೀಯರು ಇಲಾಖೆಗೆ ದೂರು ನೀಡಿ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ.

ಕಾರ್ನಾಡ್ ಸಂತೆ ಸ್ಥಳಾಂತರಿಸಲು ಅಗ್ರಹ

ಪ್ರತಿ ಶನಿವಾರ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾರ್ನಾಡ್ ಸಂತೆ ಅಪಾಯಕಾರಿಯಾಗಿದೆ.
ಸಂತೆ ಸ್ಥಳಾಂತರ ಮಾಡಿ ವಾರಕ್ಕೆ ಒಂದು ದಿನ ಕಾರ್ನಾಡ್ ಗಾಂಧಿ ಮೈದಾನದಲ್ಲಿ ನಡೆಸಲು ಅನೇಕ ಬಾರಿ ಮುಲ್ಕಿ ನಗರ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಪ್ರತಿ ಶನಿವಾರ ವಾರದ ಸಂತೆಯಿಂದ ರಸ್ತೆ ತಡೆ ಉಂಟಾಗುತ್ತಿದ್ದು , ಗ್ರಾಹಕರಿಗೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ಪ್ರತಿ ವಾರದ ಸಂತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಳ್ಳುತ್ತಿದ್ದು ಟ್ರಾಫಿಕ್ ಪೊಲೀಸರ ಕೊರತೆ ಕೂಡ ಎದ್ದು ಕಾಣುತ್ತಿದೆ ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬರುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕಾರ್ನಾಡ್ ಜಂಕ್ಷನ್ ಬಳಿ ಹಳೆಯ ಆಸ್ಪತ್ರೆಯನ್ನು ತೆರೆವುಗೊಳಿಸುತ್ತಿರುವ ಗುತ್ತಿಗೆದಾರರು ಅರ್ಧಂಬರ್ಧ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಹೆದ್ದಾರಿ ಬದಿ ಕಾಮಗಾರಿಗೆ ಇರಿಸಿರುವ ಕಲ್ಲುಗಳನ್ನು ತೆರವುಗೊಳಿಸಬೇಕು ಹಾಗೂ ಸಂಚಾರ ಸುಗಮಗೊಳಿಸಬೇಕು ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ಪರಿಶೀಲನೆ
ಅರ್ಧಂಬರ್ಧ ಕಾಮಗಾರಿಯ ಬಗ್ಗೆ ಸ್ಥಳೀಯರ ದೂರಿನ ಅನ್ವಯ ನೂತನ ಆವರಣ ಗೋಡೆ ನಿರ್ಮಾಣದ ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಬೇಟಿ ನೀಡಿ ಪರಿಶೀಲಿಸಿದ್ದಾರೆ.
ಮಾಧ್ಯಮದೊಂದಿಗೆ ಅವರು ಮಾತನಾಡಿ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ ಎಂದರು.

LEAVE A REPLY

Please enter your comment!
Please enter your name here