ಸುಂದರ ಸಾರ್ಯರವರ ಭಾವನೆಗಳ ಬೆನ್ನೇರಿ ಕವನ ಸಂಕಲನ ಬಿಡುಗಡೆ

0
11

ಪುತ್ತೂರು :ದಿನಾಂಕ :12.04.2026 ರಂದು ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವ ಪಂಚ ಕೃತಿ ಲೋಕಾರ್ಪಣೆ ಸದ್ಭಾವ ಚಿಗುರು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈವಿಧ್ಯ ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಯುವಕವಿ ಸುಂದರ ಸಾರ್ಯರವರ ಭಾವನೆಗಳ ಬೆನ್ನೇರಿ
ಚೊಚ್ಚಲ ಕವನ ಸಂಕಲನವನ್ನು ಹಿರಿಯ ಸಾಹಿತಿ ಪತ್ರಕರ್ತರಾದ ಶ್ರೀನಾರಾಯಣ ರೈ ಕುಕ್ಕುವಳ್ಳಿ ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಂಚಾಲಕರಾದ ಶ್ರೀ ಗೋಕುಲ್ ನಾಥ್ ಪಿ ವಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್,ಎಂ ಎಸ್ ನಾಗರಾಜ್ ಮೂಡಿಗೆರೆ,ಶ್ರೀ ಬಾಲಕೃಷ್ಣ ಕಾರಂತ್ ಅಳಿಕೆ, ಶ್ರೀ ಮಹಾಲಿಂಗೇಶ್ವರ ಭಟ್ ಮಧುವನ, ಶಶಿಕಲಾ ವರ್ಕಾಡಿ, ಸುಲೋಚನಾ ಪಿ ಕೆ, ಶ್ರೀ ರಮೇಶ್ ಉಳಯ, ಪತ್ರಕರ್ತರಾದ ಉದಯ್ ಕುಮಾರ್ ಯು ಎಲ್,ಸುಂದರ ಸಾರ್ಯರ ಧರ್ಮಪತ್ನಿ ಮತ್ತು ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here