ಪುತ್ತೂರು: ವರ್ಣಿಕಾ 2K26 ಅಂತರ್ ಪಿಯು ಕಾಲೇಜು ಉತ್ಸವ

0
5

ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಆಯೋಜಿಸಲಾದ ಅಂತರ್ ಪಿಯು ಕಾಲೇಜು ಉತ್ಸವ ‘ವರ್ಣಿಕಾ 2K26’ ನವೆಂಬರ್ 4, ಬುಧವಾರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಉತ್ಸವದಲ್ಲಿ ಸುಮಾರು 10 ಪದವಿಪೂರ್ವ ಕಾಲೇಜುಗಳು 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರಥಮ ಸ್ಥಾನವನ್ನು ಸುದಾನ ಪದವಿ ಪೂರ್ವ ಕಾಲೇಜು, ಪುತ್ತೂರು ಮತ್ತು ದ್ವಿತೀಯ ಸ್ಥಾನವನ್ನು ಅಂಬಿಕಾ ಪದವಿ ಪೂರ್ವ ಕಾಲೇಜು, ನೆಲ್ಲಿಕಟ್ಟೆ ಪಡೆದುಕೊಂಡಿತು.

ಉತ್ಸವದಲ್ಲಿ ಬೀಟ್ ಬ್ಯಾಟಲ್, ವಾಯ್ಸ್ ಆ್ಯಂಡ್ ವೈಬ್ ಡ್ಯೂಯೆಟ್, ಕ್ವಿಜೋರಾ, ಆಕ್ಟೊಮ್ಯಾಕ್ಸ್, ಆರ್ಟೋಪಿಯಾ, ಶಬ್ದ ಮಂಜರಿ, ಇಂಕ್ ಸ್ಪೈರ್, ಕಾವ್ಯೋದಯ, ತುಳುಟೆ ಪಾತೆರ್ಲೆ, ಹಂಟ್ರಿಕ್ಸ್ ಹಾಗೂ ವಿಸೋರಾ ಸೇರಿದಂತೆ ಒಟ್ಟು 11 ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಎಲ್. ಬಲರಾಮ ಆಚಾರ್ಯ,ಶ್ರೀಮತಿ ಶ್ರುತಿ ಶೈಲೇಶ್ ಹಾಗೂ ಚನಿಯಪ್ಪ ನಾಯಕ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಸೃಜನಶೀಲತೆ, ಕಲಾತ್ಮಕತೆ ಹಾಗೂ ವಿವಿಧ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಉತ್ಸವವು ಸಂಭ್ರಮದಿಂದ ಸಂಪನ್ನಗೊಂಡಿತು.