ದಾವಣಗೆರೆ : ಕೆಲವು ಸಾಧಕರು ಕೇವಲ ಸನ್ಮಾನಕ್ಕೆ ಸೀಮಿತವಾಗಿದೆ ನಿರಂತರವಾಗಿ ಸಮಾಜ ಸೇವೆ, ಕನ್ನಡ ನಾಡು-ನುಡಿ ಹೃದಯ ಭಾಗದಲ್ಲಿ ಇರಬೇಕು ಅನೇಕ ಸಂಘ ಸಂಸ್ಥೆಗಳು ಮಾಡದ ಹೊಸ ಹೊಸ ಪರಿಕಲ್ಪನೆಯೊಂದಿಗೆ ಕಳೆದ 36 ವರ್ಷಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಿರುವ ಸಂಸ್ಥೆ ಕಲಾಕುಂಚ ಕೆಲವು ಸಂಘಟನೆಗಳು ಆರಂಭ ಶೂರುತ್ವಕ್ಕೆ ಸೀಮಿತವಾಗಿರುತ್ತದೆ ದಾವಣಗೆರೆಯ ಈ ಸಂಸ್ಥೆ ಇತರ ಸಂಘಟನೆಗಳಿಗೆ ಮಾದರಿ ಎಂದು ಬೀದರ್‌ನ ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಳ್ಳಿ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಮತ್ತು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಿನ್ನೆ ತಾನೇ ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ “ಸರಸ್ವತಿ ಕನ್ನಡ ರತ್ನ”ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಮಾತನಾಡಿ, ಕಲಾಕುಂಚ ಕೇವಲ ದಾವಣಗೆರೆಗೆ ಸೀಮಿತವಾಗದೇ ವಿವಿಧ ಜಿಲ್ಲೆಗಳ ಜೊತೆಗೆ ಕೇರಳ ಗಡಿನಾಡ ಶಾಖೆಗಳನ್ನು ಪ್ರಾರಂಭ ಮಾಡಿ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ,ಯಕ್ಷಗಾನ ಚಟುವಟಿಕೆಗಳನ್ನು ಕಳೆದ ಮೂರವರೆ ದಶಕಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ವಿಶ್ವದರ್ಶನ' ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಎಸ್.ಎಸ್. ಪಾಟೀಲ್ ರಾಯಚೂರಿನಸಂಜೆವಾಹಿನಿ’ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಅಣ್ಣಪ್ಪ ಮೇಟಿಗೌಡ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ಕವಯತ್ರಿ, ಸಾಹಿತಿ, ಡಾ. ಶ್ರೀದೇವಿ ಸೂರ್ಯಕಂತ ಸುವರ್ಣ ಖಂಡಿ, ದಾವಣಗೆರೆಯ `ವಿಸ್ಮಯ ವಾಣಿ’ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಬಿ.ವಾಸುದೇವ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್ ರವರು ಮಾತನಾಡಿ, ಒಂದು ಸಂಘಟನೆ ಸುಲಭದ ಮಾತಲ್ಲ ಈ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಯಾವುದೇ ರಾಜಕೀಯ ಇಲ್ಲದೇ ಯಾವುದೇ ಸರ್ಕಾರದ ಅನುದಾನ ಇಲ್ಲದೇ ಹೊಸ ಹೊಸ ಕವಿಗಳಿಗೆ, ಸಾಹಿತಿಗಳಿಗೆ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ವೇದಿಕೆ ಕಲ್ಪಿಸುವ ಸಂಸ್ಥೆ ಕಲಾಕುಂಚ.
ಸಾಮನ್ಯ ಜ್ಞಾನ ಇಲ್ಲದ ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಕಾಳಜಿಯ ಅರಿವು ಮೂಡಿಸುವ ಮಕ್ಕಳ ಮುಂದಿನ ಜೀವನದ ಭವ್ಯ-ದಿವ್ಯ ಸಾಧನೆ ಮಾಡುವ ಹೊಸ ಪರಿಕಲ್ಪನೆಯೊಂದಿಗೆ ವಿವಿದ ಜಿಲ್ಲೆಗಳ, ಹಳ್ಳಿ ಗ್ರಾಮಾಂತರ ಶಾಲೆಗಳಿಗೆ ಪರೀಕ್ಷೆಯ ಮೊದಲೇ ಉಚಿತವಾಗಿ ಪರೀಕ್ಷಾ ಪೂರ್ವ ಸಿದ್ದತೆಯ ಕಾರ್ಯಾಗಾರ ಮಾಡುತ್ತಿರುವ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರ ಸಾಧನೆ ಪ್ರೌಢಶಾಲೆಯ ಮೆಟ್ಟಲೇರದೇ ಕೇವಲ ಪ್ರಾಥಮಿಕ ಶಾಲೆಗೆ ಸೀಮಿತವಾದ ಶೆಣೈಯವರು ಮಾಡಿದ ಮೆಚ್ಚುಗೆ ಅದೇ ಅವರ ದೇವರ ಸೇವೆ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದಾರೆ ಎಂದರು.
ಉದ್ಘಾಟಕರು ಸೇರಿದಂತೆ ಮುಖ್ಯ ಅತಿಥಿಗಳಿಗೆ ಸಮಾರಂಭ ಪ್ರಾರಂಭದಲ್ಲಿ ವಿದುಷಿ ನೇತ್ರಾವತಿ ಸಾಯಿಪ್ರಕಾಶ್ ಪ್ರಾರ್ಥನೆ ಮಾಡಿದರು. ಪುಷ್ಪ ಮಂಜುನಾಥ್ ಸ್ವಾಗತಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು

