ಮೂಡುಬಿದಿರೆ ತಾಲೂಕಿಗೆ ಸುವ್ಯವಸ್ಥಿತ ಸರಕಾರಿ ಆಸ್ಪತ್ರೆಗೆ ಒತ್ತಾಯಿಸಿ ಸಿಪಿಐಎಂ ಬೃಹತ್ ಧರಣಿ

0
89

ಮೂಡುಬಿದಿರೆ ತಾಲೂಕು ರಚನೆಯಾಗಿ ಹಲವಾರು ವರ್ಷಗಳೇ ಕಳೆದರೂ ತಾಲೂಕಿಗೆ ಉತ್ತಮ ವ್ಯವಸ್ಥಿತವಾದ ಸರಕಾರಿ ಆಸ್ಪತ್ರೆ ಇಲ್ಲದೆ ಬಡ ಹಾಗೂ ಮಧ್ಯಮ ವರ್ಗದವರು ಒದ್ದಾಡುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಅರಿವಳಿಕೆ ಮತ್ತು ದಂತ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರ ಮಾತ್ರ ಇದ್ದಾರೆ. ದಾದಿಯರು ಮತ್ತು ಸಿಬ್ಬಂದಿಗಳ ಕೊರತೆ ಇದೆ. ಇರುವ ಕೆಲವು ದಾರಿಯರು ಸಮರ್ಪಕವಾಗಿ ಕೆಲಸಕ್ಕೆ ದೊರಕುತ್ತಿಲ್ಲ. ಹಣಕಾಸಿನ ಕೊರತೆಯಿಂದಾಗಿ ಔಷಧಿಗಳು ಇಲ್ಲಿ ಕೆಲವಾರು ಬಾರಿ ಲಭ್ಯವಿರುವುದಿಲ್ಲ. ಇಂತಹ ಹಲವಾರು ಕೊರತೆಗಳಿಂದ 30 ಬೆಡ್ಡಿನ ಆಸ್ಪತ್ರೆ ರೋಗಿಗಳನ್ನು ನಿರೀಕ್ಷಿಸುತ್ತಾ ಬಿಕೋ ಎನ್ನುತ್ತಿದೆ.

ಬಡ ಹಾಗೂ ಮಧ್ಯಮ ವರ್ಗದ ಜನರು ಸಾಲ ಮಾಡಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಒದ್ದಾಡುತ್ತಿದ್ದಾರೆ. ಸರಕಾರಿ ಆಸ್ಪತ್ರೆಯ ಕೊರತೆಗಳಿಂದಾಗಿ ಖಾಸಗಿ ಆಸ್ಪತ್ರೆ ತುಂಬಿ ತುಳುಕುತ್ತಿದೆ.
ಮೂಡುಬಿದಿರೆಯ ಸರಕಾರಿ ಸಮುದಾಯ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯಾಗಿ ರಾಜ್ಯ ಸರ್ಕಾರ ಘೋಷಿಸಿ ಸೂಕ್ತ ಎಲ್ಲ ರೀತಿಯ ಸೌಲಭ್ಯಗಳನ್ನು ದೊರಕುವಂತೆ ಮಾಡಬೇಕು. ಎಲ್ಲಾ ರೀತಿಯ ಕಾಯಿಲೆಗಳಿಗೆ ತಜ್ಞ ವೈದ್ಯರುಗಳು, ಉಚಿತ ತಪಾಸಣೆ, ತುತ್ತು ಚಿಕಿತ್ಸಾ ಸೌಲಭ್ಯ, ಉಚಿತ ರೋಗ ನಿರ್ಣಯ ಪರೀಕ್ಷೆ, ಎಕ್ಸರೇ, ಇಸಿಜಿ, ಅಲ್ಟ್ರಾ ಸೌಂಡ್, ಸಿಟಿ ಸ್ಕ್ಯಾನ್, ಮೂತ್ರ ಮತ್ತು ರಕ್ತ ಪರೀಕ್ಷೆ, ಪ್ರಸೂತಿ ಮತ್ತು ಸ್ತ್ರೀರೋಗ, ಮೂಳೆ ಮತ್ತು ಶಿಶು ಚಿಕಿತ್ಸೆ, ಇತ್ಯಾದಿ ಎಲ್ಲಾ ಸೌಲಭ್ಯಗಳೊಂದಿಗೆ ಲಸಿಕೆ ಮತ್ತು ಔಷಧಿಗಳು, ಡಯಾಲಿಸಿಸ್, ಆಂಬುಲೆನ್ಸ್ ಮತ್ತು ಒಳರೋಗಿಗಳಿಗೆ ಊಟದ ವ್ಯವಸ್ಥೆಯು ಕೂಡ ಸಿಗುವಂತಾಗಬೇಕೆಂದು ಮೂಡುಬಿದಿರೆ ತಾಲೂಕು ಸಿ ಪಿ ಐ ಎಂ ಸದಸ್ಯರುಗಳು ಸೇರಿ ಬೃಹತ್ ಸಾರ್ವಜನಿಕ ಸಾಮೂಹಿಕ ಧರಣಿಯನ್ನು ತಾಲೂಕು ಕಚೇರಿಯ ಎದುರು ಏಪ್ರಿಲ್ 21ರಂದು ನಡೆಸಿದರು.

ಮೂಡುಬಿಗೆರೆ ಜೀವಿ ಪೈ ಆಸ್ಪತ್ರೆ ಬಳಿಯ ಸಿಪಿಐಎಂ ಪಕ್ಷದ ಕಚೇರಿಯಿಂದ ಹೊರಟ ಬೃಹತ್ ಪಾದಯಾತ್ರೆ ತಾಲೂಕು ಕಚೇರಿಯ ಮಿನಿ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುವ ಮೂಲಕವಾಗಿ ಧರಣಿಯನ್ನು ಹಮ್ಮಿಕೊಂಡರು.

ಬೃಹತ್ ಸಾರ್ವಜನಿಕ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ, ಮುನೀರ್ ಕಾಟಿ ಪಳ್ಳ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಮೂಡಬಿದಿರೆ ತಾಲೂಕು ಸಮಿತಿ ಕಾರ್ಯದರ್ಶಿ ರಮಣಿ, ಜಿಲ್ಲಾ ಸಮಿತಿ ಸದಸ್ಯ ರಾಧಾ, ತಾಲೂಕು ಸಮಿತಿ ಸದಸ್ಯರುಗಳಾದ ಗಿರಿಜಾ, ಶಂಕರ, ಲಕ್ಷ್ಮಿ, ಕೃಷ್ಣಪ್ಪ ಕೊಣಾಜೆ, ಬೇಬಿ, ಪದ್ಮಾವತಿ, ಆದಿವಾಸಿ ಬುಡಕಟ್ಟು ಸಮುದಾಯದ ಜಿಲ್ಲಾಧ್ಯಕ್ಷ ಕರಿಯ ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here