ಬೈಂದೂರು ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ

0
48

ಬೈಂದೂರು: ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನಮಹೋತೊಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಮನ್ಮಹಾರಥೋತ್ಸವ ಬುಧವಾರ ಸಂಭ್ರಮ ಸಡಗರದಿಂದ ನಡೆಯಿತು.

ಬೆಳಿಗ್ಗೆ ದೇವರಿಗೆ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಸಂಜೆ ಸಂಭ್ರಮ ಸಡಗರದಿಂದ ಮನ್ಮಹಾರಥೋತ್ಸವ ನಡೆಯಿತು.ಸಾವಿರಾರು ಭಕ್ತರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.

ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯ ಈ ಭಾರಿ ಮತ್ತಷ್ಟು ಅಲಂಕೃತಗೊಂಡಿದ್ದು, ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡಿತು. ಹಬ್ಬದ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಇಡಿ ನಗರವೇ ವಿದ್ಯುತ್ ದೀಪಾಲಂಕಾರದಿಂದ ಸಜ್ಜಾಗಿದೆ

ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭ್ರಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ.

ನಗರೋತ್ಸವದಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ರಥೋತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತದೆ. ರಥೋತ್ಸವದ ರಾತ್ರಿ ಓಕುಳಿ ಹೊಂಡದ ಆಟ ವಿಶೇಷವಾಗಿ ಜರುಗುತ್ತವೆ.

ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಗಿರೀಶ್ ಬೈಂದೂರು ಮಾತನಾಡಿ ಈ ವರ್ಷ ಬಹಳ ಅದ್ದೂರಿಯಿಂದ ಜಾತ್ರಾ ಮಹೋತ್ಸವವು ಜರುಗಿತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಥಿಸಿದರು

ಈ ಸಂಧರ್ಭದಲ್ಲಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ,
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,
,ಜಿ.ಪಂ ಮಾಜಿ ಅಧ್ಯಕ್ಷ ಎಸ್ .ರಾಜು ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜೇಶ ಐತಾಳ್, ಬಿ. ದೊಟ್ಟಯ್ಯ ಪೂಜಾರಿ, ಪರಮೇಶ್ವರ ಪಟ್ಬಾಲ್, ಪ್ರಶಾಂತ ಕುಮಾರ ಶೆಟ್ಟಿ, ಜಯರಾಮ ಯಡ್ತರೆ, ವಸಂತ ಕುಮಾರ್ ಶೆಟ್ಟಿ, ಇಂದಿರಾ ಕೊಠಾರಿ, ಶಾಂತಾ ಆಚಾರ್ಯ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಉದ್ಯಮಿ ಸುಖಾನಂದ ಶೆಟ್ಟಿ,ಧಾರ್ಮಿಕ ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು,ದೇವಸ್ಥಾನದ ಸಿಬ್ಬಂದಿಗಳು ಹಾಗೂ ಅರ್ಚಕರು.

ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾ‌ರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುನೀಲ್‌ ಕುಮಾ‌ರ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here