ತುಳು ಅಧಿಕೃತ ಭಾಷೆ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕಂಬಳ ಸಮಿತಿ ಅಭಿನಂದನೆ

0
9

ಮೂಡುಬಿದಿರೆ: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ್ ಸನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬಳ ಕ್ಷೇತ್ರಕ್ಕೆ ಹಾಗೂ ಕಂಬಳಕ್ಕೆ ವಿಶೇಷ ಅನುದಾನ ಘೋಷಣೆ ಮಾಡಿರುವುದಕ್ಕೂ ಅವರು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಈ ಘೋಷಣೆಗಳಿಗೆ ಸಮಸ್ತ ಕಂಬಳದ ಪದಾಧಿಕಾರಿಗಳ ಪರವಾಗಿ ಹಾಗೂ ಕಂಬಳದ ಯಜಮಾನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಚಂದ್ರಹಾಸ್ ಸನಿಲ್ ತಿಳಿಸಿದ್ದಾರೆ.