ರಾಮಚಂದ್ರ ಬೈಕಂಪಾಡಿ ನೈಜ ಕಾಳಜಿಯ ಸಾಂಸ್ಕೃತಿಕ ನಾಯಕ : ಡಾ. ಪ್ರಭಾಕರ ಜೋಶಿ

0
22

ಮಂಗಳೂರು : ಸಾಂಸ್ಕೃತಿಕ ಸಂಘಟಕ, ನಾಟಕಕಾರ ಹಾಗೂ ರಾಜಕಾರಣಿ ರಾಮಚಂದ್ರ ಬೈಕಂಪಾಡಿ ಅವರಲ್ಲಿ ನೈಜ ಸಾಂಸ್ಕೃತಿಕ ಕಾಳಜಿ ಇತ್ತು ಅವರು ರಾಜಕೀಯ ನೇತಾರರಾಗಿದ್ದರೂ ಅವರು ರಾಜಕೀಯ ಅದೃಷ್ಟವಂತರಾಗಿರಲಿಲ್ಲ , ಕರಾವಳಿಯ ಸಾಂಸ್ಕೃತಿಕ ಲೋಕಕ್ಕೆ ಅವರದ್ದು ದೊಡ್ಡ ಕೊಡುಗೆ ಇದೆ ಎಂದು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಶಿ ಅವರು ಹೇಳಿದರು.

ಮಂಗಳೂರು ತುಳು ಭವನದಲ್ಲಿ ಶನಿವಾರ ಆಯೋಜಿಸಲಾದ ತುಳು ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳು ಅಕಾಡೆಮಿಯ ವಾರ್ಷಿಕ ಗೌರವ ಪುರಸ್ಕೃತ ನಾಟಕಕಾರ ರಾಮಚಂದ್ರ ಬೈಕಂಪಾಡಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ, ರಾಮಚಂದ್ರ ಬೈಕಂಪಾಡಿ ಅವರು ಅನೇಕ ಮಂದಿಯ ಬದುಕು ರೂಪಿಸಲು ಕಾರಣಕರ್ತರಾಗಿದ್ದರು ಎಂದು ಬಣ್ಣಿಸಿದರು.‌

ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಅವರು ಮಾತನಾಡಿ, ಮಂಗಳೂರಿನಲ್ಲಿ ಎಲ್ಲಾ ಕಲಾವಿದರನ್ನು ಒಗ್ಗೂಡಿಸಿ ಸಾಂಸ್ಕೃತಿಕ ಕ್ರಿಯಾ ರಂಗ ಸಂಸ್ಥೆಯನ್ನು ಮುನ್ನಡೆಸುವಲ್ಲಿ ರಾಮಚಂದ್ರ ಬೈಕಂಪಾಡಿ ಅವರು ನಾಯಕತ್ವ ನೀಡಿದವರಾಗಿದ್ದರು ಎಂದು ನೆನಪಿಸಿದರು.

ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ ಅವರು ಮಾತನಾಡಿ, ಅನೇಕ ಪರಿಸರ ಪರ ಹೋರಾಟಗಳಲ್ಲಿ ರಾಮಚಂದ್ರ ಬೈಕಂಪಾಡಿ ಅವರು ಮುಂಚೂಣಿಯಲ್ಲಿ ಇದ್ದರು ಎಂದು ಹೇಳಿದರು.‌

ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಬೈಕಂಪಾಡಿ ಮೋಗವೀರ ಸಮಾಜದ ಮುಖಂಡ ಶೋಭೇಂದ್ರ ಶಶಿ‌ಹಿತ್ಲು ನುಡಿ ನಮನ ಸಲ್ಲಿಸಿದರು.‌

ಹಿರಿಯ ರಂಗ ನಿರ್ದೇಶಕ ತಮ್ಮ ಲಕ್ಷ್ಮಣ, ರಾಷ್ಟ್ರೀಯ ಕ್ರೈಸ್ತ ವೇದಿಕೆಯ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೋ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಧನರಾಜ್ ಸುರತ್ಕಲ್, ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿದರು.

ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ದೇವದಾಸ್ ಭಂಡಾರಿ ಮುಂಬೈ, ಆರ್‌.ಎಂ ಕುಲಾಲ್ ಮುಂಬೈ, ದಿನೇಶ್ ಕುಲಾಲ್ ಮುಂಬಯಿ, ದಯಾ ಸಾಗರ್ ಚೌಟ ಮುಂಬೈ , ಸಂಕೇತ್ ರಂಗ ಸಂಸ್ಥೆಯ ಅಧ್ಯಕ್ಷ ಹರೀಶ್ ಶಕ್ತಿ ನಗರ, ಕಲಾವಿದೆ ಪ್ರಮೀಳ ಮೆಂಡೋನ್ಸಾ, ನಟ ಮೋಹನ್ ಬೋಳಾರ್, ಸುಧಾಕರ ರಾವ್, ರಂಜನ್ ಬೋಳೂರು ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here