ರಾಷ್ಟ್ರೀಯ ಗೋಮಾತೆ ಗೌರವ ಅಭಿಯಾನ ಸರಕಾರಕ್ಕೆ ಮನವಿ ಸಲ್ಲಿಕೆ

0
6

ಬ್ರಹ್ಮಾವರ : ಗೋಮಾತೆಯ ಗೌರವ ಅಭಿಯಾನ ಅಂಗವಾಗಿ ಗೋಮಾತಾ ಗೌರವ ದಿನ ಆಚರಣೆಯನ್ನು ಅದೇ ರೀತಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರ ಮೂಲಕ ಇಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಗೋಮಾತಾ ಗೌರವ ಅಭಿಯಾನದ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಶ್ರೀ ಕ್ಷೇತ್ರ ಶಂಕರಪುರದ ಪೀಠಾಧ್ಯಕ್ಷರಾದ ಸಾಯಿ ಈಶ್ವರ್ ಗುರೂಜಿ, ಗೋವನ್ನು ರಾಷ್ಟ್ರ ಮಾತೆಯನ್ನಾಗಿ ಗೌರವದ ಸ್ಥಾನಮಾನ ನೀಡಬೇಕು ಗೋ ಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು ಮತ್ತು ಕೇಂದ್ರೀಯ ಸತ್ಯವಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಮೇವು ಭದ್ರತಾ ನೀತಿ ಗೋ ಆಧಾರಿತ ಕೃಷಿ ಗೋ ಉತ್ಪನ್ನಗಳ ಮಾರುಕಟ್ಟೆ ಹೆಚ್ಚಳ, ಅದೇ ರೀತಿ ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಗೋಮಾತೆಯ ಗೌರವ ಅಭಿಯಾನದ ಬ್ರಹ್ಮಾವರ ತಾಲೂಕು ಪ್ರಮುಖರಾದ ರಾಘವೇಂದ್ರ ಪ್ರಭು ಕವಾ೯ಲು, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಧುಸೂದನ್ ಹೇರೂರು, ಶ್ರೀನಾಥ್ ಕೋಟ, ಸತ್ಯ ರಾಜ್ ಬ್ರಹ್ಮಾವರ, ಸತೀಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here