ಮಂಗಳೂರಿನ ಮೈಂಡ್ ಫುಲ್ ಕನ್ಸಲ್ಟಿಂಗ್ ಸಂಸ್ಥೆಗೆ ಸಿ ಐ ಐ ರಾಷ್ಟ್ರೀಯ ಪ್ರಶಸ್ತಿ

0
19

ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯವರು ಆಯೋಜಿಸಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮಂಗಳೂರಿನ ಮೈಂಡ್ ಫುಲ್ ಕನ್ಸಲ್ಟಿಂಗ್ ಸಂಸ್ಥೆಗೆ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಅಗ್ರ ಪ್ರಶಸ್ತಿ ದೊರೆತಿದೆ. ರಾಷ್ಟ್ರಮಟ್ಟದಲ್ಲಿ 205 ಕಂಪನಿಗಳು ಭಾಗವಹಿಸಿದ್ದು ಮೈಂಡ್ ಫುಲ್ ಕನ್ಸಲ್ಟಿಂಗ್ ಅವರ 33 ಶ್ರೇಷ್ಠ ಕಾರ್ಯ ವಿಧಾನಗಳಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದು ಅಗ್ರಪಂಕ್ತಿಯಲ್ಲಿ ರಾರಾಜಿಸಿದೆ.

ಸಾಮಾಜಿಕ ಜಾಲತಾಣದ ಮೂಲಕ ಮೈಂಡ್ ಫುಲ್ ಕನ್ಸಲ್ಟಿಂಗ್ ಸಂಸ್ಥೆಯ ಸಂಸ್ಥಾಪಕ ಸಂಜಯ್ ಭಟ್ ಸ್ತನ ಕ್ಯಾನ್ಸರ್ ತಪಾಸಣೆಯ ಮೇಲೆ ಜಾಗೃತಿಯನ್ನು ಕೇಂದ್ರೀಕರಿಸಿ ಅಭಿಯಾನದ ವೆಚ್ಚವನ್ನು ಮಹತ್ತರವಾಗಿ ಇಳಿಸುವಲ್ಲಿ ಅಪರೂಪದ ಸಾಧನೆಯನ್ನು ತೋರಿ ಒಂದುವರೆ ಕೋಟಿಗೂ ಅಧಿಕ ಜನರಲ್ಲಿ ಈ ಬಗ್ಗೆ ತಿಳುವಳಿಕೆಯನ್ನು ಮೂಡಿಸಿರುತ್ತಾರೆ.

ಮಂಗಳೂರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಿ ಐ ಐ ಮಂಗಳೂರು ಘಟಕದ ಅಧ್ಯಕ್ಷ ಅಭಿನವ ಬನ್ಸಾಲ್, ಕೆ ಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಕೃಷ್ಣಶರಣ್, ಕೆ ಎಂ ಸಿ ಯ ಪ್ರೊಫೆಸರ್ ಆಫ್ ಸರ್ಜರಿ ಡಾ. ಮನೋಹರ್ ಪೈ, ಎಜೆ ಆಸ್ಪತ್ರೆಯ ತಜ್ಞರುಗಳಾದ ಡಾ ಪ್ರವೀಣ್ ಜಾನ್, ಡಾ ಶ್ರವ್ಯ ರವರುಗಳು ಮಾತನಾಡಿ ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಿದ ಪ್ರಯತ್ನವನ್ನು ಶ್ಲಾಘಿಸಿದರು.

ಸಂಪೂರ್ಣವಾಗಿ ನಿವಾರಿಸಲು ಅನಿವಾರ್ಯವಾದರೂ ಕೂಡ ಆರಂಭಿಕ ಹಂತದಲ್ಲಿ ಸ್ವಯಂ ಪರೀಕ್ಷೆಯನ್ನು ಮ್ಯಾಮೊಗ್ರಾಫಿ ಮೂಲಕ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ನ ಪತ್ತೆಯನ್ನು ಶೀಘ್ರವಾಗಿ ಕಂಡುಕೊಂಡು ಉತ್ತಮ ಪರೀಕ್ಷೆಯ ಮೂಲಕ ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು. ಮ್ಯಾಮೋಗ್ರಫಿಯು ಅತ್ಯಂತ ಕಡಿಮೆ ಖರ್ಚಿನ ಪರೀಕ್ಷೆಯಾಗಿದ್ದು 40 ವರ್ಷ ಮೇಲ್ಪಟ್ಟವರು ಮಾಡಿಸಿಕೊಂಡಲ್ಲಿ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು.
.

LEAVE A REPLY

Please enter your comment!
Please enter your name here