ಆಟೋ ರಿಕ್ಷಾ ಚಾಲಕ ಮಾಲಕರ ಸಂಘ( ರಿ ) ಶಿರ್ಲಾಲ್ ಕರಂಬಾರು -ಕೆದ್ದು, ಅಳದಂಗಡಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ -2026 ಎಲ್ಲಾ ಸದಸ್ಯರ ಸಹಕಾರ ದಿಂದ ಶಿರ್ಲಾಲ್ ನಿಂದ ಕೆದ್ದು ಮುಖ್ಯ ರಸ್ತೆಯ ತನಕ ಸ್ವಚ್ಛತೆಯನ್ನು ಮಾಡಿದ್ದು ಮಾರ್ಗದ ಎರಡು ಭಾಗದಲ್ಲಿ ಕೂಡ ಸೊಪ್ಪುಗಳನ್ನು ಕಡಿದು ನಂತರ ಮಳೆಗಾಲದಲ್ಲಿ ಬರುವ ನೀರನ್ನು ನೇರವಾಗಿ ಚರಂಡಿಗೆ ಹೋಗುವಂತೆ ಮಾಡಿರುತ್ತಾರೆ.
.ವಿದ್ಯುತ್ ಕಂಬಗಳಿಗೆ ತೊಂದರೆ ಆಗುವ ಮರದ ರೆಂಬೆಗಳನ್ನು ತೆರವು ಮಾಡಿದ್ದು.. ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಸದಸ್ಯರು ತುಂಬಾ ಪರಿಶ್ರಮ ಪಟ್ಟಿರುತ್ತಾರೆ. ಶ್ರಮದಾನದಲ್ಲಿ ಭಾಗವಹಿಸಿದ ಸದಸ್ಯರಿಗೆ ಚಾ ತಿಂಡಿಯನ್ನು ಕೊಡುಗೈ ದಾನಿಗಳು ಆಗಿರುವ ಅಶೋಕ್ ಶೆಟ್ಟಿ ಸುಲ್ಕೆರಿ ಇವರು ನೀಡಿದ್ದು.ಪಾನೀಯ ಮತ್ತು ಇನ್ನಿತರ ತಿಂಡಿಯ ವ್ಯವಸ್ಥೆಯನ್ನು ನಮ್ಮ ಸದಸ್ಯರುಗಳು ನೀಡಿರುತ್ತಾರೆ.
ಶ್ರಮದಾನಕ್ಕೆ ಬೇಕಾದ ಪರಿಕರಗಳನ್ನು ಸದಸ್ಯರು ನೀಡಿರುತ್ತಾರೆ. ಅದೇ ರೀತಿ ಲೈನ್ ಮ್ಯಾನ್ ಗಳಾದ ಗಣೇಶ್ ಮತ್ತು ಶಿವಾನಂದ ಉಳ್ಳಿ ಇವರುಗಳು ಕೂಡ ನಮ್ಮ ಜೊತೆಗೆ ಕೈ ಜೋಡಿಸಿದ್ದಾರೆ ಹಾಗೆಯೇ ಸಹಕರಿಸಿದ ಎಲ್ಲಾರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.

