ಕಾರ್ಕಳ : ಕರ್ನಾಟಕ ಜೈ ಭೀಮ್ ಹಾಗೂ ಯುವ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ಜೈ ಭೀಮ್ ಯುವಸೇನೆ ಇವರ ವತಿಯಿಂದ ದ್ವಿತೀಯ ವರ್ಷದ ಸಂಭ್ರಮದ ಅಂಗವಾಗಿ ಮೇ 24ರಂದು ಕಾರ್ಕಳದ ಬಂಡಿ ಮಠದ ಬಸ್ ನಿಲ್ದಾಣದಲ್ಲಿ ಪರಿಶಿಷ್ಟ ಜಾತಿ ಪಂಗಡದ ಒಂದರಿಂದ ಹತ್ತನೇ ತರಗತಿವರೆಗೆ ಅಭ್ಯಾಸ ಮಾಡುತ್ತಿರುವ ಸುಮಾರು 2000 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗ್ ಸೇರಿದಂತೆ ಅಗತ್ಯ ಶಿಕ್ಷಣ ಪರಿಕರಗಳನ್ನು ವಿತರಿಸಲಾಗುವುದು ಎಂದು ರಾಜ್ಯಧ್ಯಕ್ಷ ಅಶೋಕ್ ಕುಮಾರ್ , ಕುಂಟಲ ಪಾಡಿ ಕಾರ್ಕಳದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌದ್ರಿ ಕಾಂಗ್ರೆಸ್ ಮುಖಂಡ ಮುನಿಯಾ ಉದಯಕುಮಾರ್ ಶೆಟ್ಟಿ ಶಾಸಕರಾದ ವಿ ಸುನಿಲ್ ಕುಮಾರ್ ಲೆಕ್ಕ ಪರಿಶೋಧಕರಾದ ಕಮಲಕ್ಷ ಕಾಮತ್, ನವೋದಯ ಚ್ಯಾರಿ ಟೇಬಲ್ ಟ್ರಸ್ಟ್ ಹಾಗೂ ಅಪೇಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್, ಎಂಎಲ್ಸಿ ಮಂಜುನಾಥ ಬಂಡಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಇನಯತ್ ಅಲಿ, ಉದ್ಯಮಿ ರಾಮಕೃಷ್ಣ ಆಚಾರ್ ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಅವರು ನಮ್ಮ ಸಮುದಾಯ ಮೂಲಭೂತವಾಗಿ ಹಿಂದಿದೆ ಒಗ್ಗಟ್ಟಾಗಿ ಸಮುದಾಯವನ್ನು ಮೇಲಕೆತ್ತುವ ಕಾರ್ಯವನ್ನು ಮಾಡಬೇಕು ಸರ್ಕಾರದ ಅನುದಾನಗಳನ್ನು ಬಳಸಿಕೊಂಡು ಮಕ್ಕಳ ವಿದ್ಯಾಭ್ಯಾಸ ವನ್ನು ಮುಂದುವರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಲೋಕೇಶ್, ಎಂ ಎಸ್ ಮೂಡಬಿದ್ರೆ ಉಡುಪಿ ಮಹಿಳಾ ಅಧ್ಯಕ್ಷ ಶಾಂತಿನಿಟ್ಟೆ, ಮಹಿಳಾ ಕಾರ್ಯದರ್ಶಿ ಪ್ರೇಮ, ಸಂಘಟನಾ ಕಾರ್ಯದರ್ಶಿ ನವೀನ್ ನಿಟ್ಟೆ, ಕಾರ್ಕಳ ತಾಲೂಕು ಅಧ್ಯಕ್ಷ ಸುನಿಲ್ ನಿಂಜೂರು, ಹೆಬ್ರಿ ತಾಲೂಕ ಅಧ್ಯಕ್ಷ ರಮೇಶ್ ಆರ್, ಮೂಡಬಿದಿರೆ, ಮುಂತಾದವರು ಉಪಸ್ಥಿತರಿದ್ದರು.

