ಕಾರ್ಕಳ: ಬೈಲೂರಿನ ಖ್ಯಾತ ಉದ್ಯಮಿ ಹಾಗೂ ಪ್ರಮುಖ ಸಮಾಜಸೇವಕರಾಗಿದ್ದ ಲಯನ್ ರಾಮಕೃಷ್ಣ ಶೆಟ್ಟಿ ಅವರ ನಿಧನಕ್ಕೆ ಕಾರ್ಕಳದ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ತೀವ್ರ ಆಘಾತ ಮತ್ತು ಕಂಬನಿ ವ್ಯಕ್ತಪಡಿಸಿದ್ದಾರೆ.
ಮೃತ ರಾಮಕೃಷ್ಣ ಶೆಟ್ಟಿ ಅವರು ಲಯನ್ಸ್ ಸಂಸ್ಥೆಯ ಮೂಲಕ ದೀರ್ಘಕಾಲದಿಂದ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ವ್ಯಾಪಾರ ರಂಗದಲ್ಲಿ ಯಶಸ್ಸು ಕಾಣುವುದರ ಜೊತೆಗೆ, ಸಮಾಜದ ಏಳಿಗೆಗಾಗಿ ಅವರು ನೀಡಿದ ಕೊಡುಗೆಗಳು ಅಪಾರವಾಗಿದ್ದವು. ಅವರ ಅಗಲಿಕೆಯು ಇಡೀ ಬೈಲೂರು ಮತ್ತು ಕಾರ್ಕಳ ಪರಿಸರಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಮುನಿಯಾಲು ತಿಳಿಸಿದ್ದಾರೆ.
ತಮ್ಮ ಸರಳ ಸಜ್ಜನಿಕೆಯ ನಡವಳಿಕೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದ ರಾಮಕೃಷ್ಣ ಶೆಟ್ಟಿ ಅವರ ಸಾಮಾಜಿಕ ಕಳಕಳಿ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ನೊಂದಿರುವ ಬಂಧು-ಮಿತ್ರರು ಹಾಗೂ ಹಿತೈಷಿಗಳಿಗೆ ಭಗವಂತನು ಧೈರ್ಯ ನೀಡಲಿ ಎಂದು ಉದಯ ಶೆಟ್ಟಿ ಮುನಿಯಾಲು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

