ಬೆಂಗಳೂರು : ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ್ ಪೂಜಾರಿ ಅವರಿಗೆ ಹವ್ಯಾಸಿ ಕಲಾವಿದೆ ಮೀನಾಕ್ಷಿ ಅಂಬಯ್ಯ ಗುತ್ತೇದಾರ್ ಅವರು ಬಿಡಿಸಿದ ನಾರಾಯಣ ಗುರು ಅವರ ಸುಂದರ ಭಾವಚಿತ್ರವನ್ನು ಬೆಂಗಳೂರಿನಲ್ಲಿ ಹಸ್ತಾಂತರಿಸಿದರು.
ಈ ಕಲಾಕೃತಿಯನ್ನು ಸ್ವೀಕರಿಸಿದ ನಿಗಮದ ಅಧ್ಯಕ್ಷರು ಅದರ ಕಲಾತ್ಮಕತೆ ಮತ್ತು ಭಾವಪೂರ್ಣತೆಯನ್ನು ಮೆಚ್ಚಿ ಅಭಿನಂದನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಬಯ್ಯ ಗುತ್ತೇದಾರ್ ಅವರು ಉಪಸ್ಥಿತರಿದ್ದರು.
ನಾರಾಯಣ ಗುರುಗಳ ಜೀವನ ಸಂದೇಶವನ್ನು ಕಲೆಯ ಮೂಲಕ ಪ್ರಸ್ತುತಪಡಿಸಿರುವ ಈ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

