ಬಹ್ರೇನ್–ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಕ್ಕೆ ಮನವಿ : ಗಣೇಶ್ ಮಾಣಿಲ ಪತ್ರ

0
25

ಮಂಗಳೂರು : ಬಹ್ರೇನ್ ಮತ್ತು ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸುವಂತೆ ಪತ್ರಿಕೆಯ ಸಂಪಾದಕರೂ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಗಣೇಶ್ ಮಾಣಿಲ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದ ಮಾನ್ಯ ಸಂಸತ್ ಸದಸ್ಯರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಅವರು ಪತ್ರ ಬರೆದು, ಹಿಂದೆ ವಾರಕ್ಕೆ ಎರಡು ಬಾರಿ ಬಹ್ರೇನ್–ಮಂಗಳೂರು ನಡುವೆ ನೇರ ವಿಮಾನ ಸೇವೆ ಇದ್ದು, ಯುದ್ಧದ ಬಳಿಕ ಅದು ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ. ಈಗ ಬಹ್ರೇನ್‌ನಿಂದ ಕೇರಳಕ್ಕೆ ನೇರ ವಿಮಾನ ಸೇವೆ ಆರಂಭವಾಗಿದ್ದರೂ, ಕಾಸರಗೋಡು ಸೇರಿದಂತೆ ಮಂಗಳೂರು ಭಾಗದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಜನರ ಅನುಕೂಲಕ್ಕಾಗಿ ಮತ್ತು ಪ್ರಯಾಣ ಸುಗಮಗೊಳಿಸಲು ಬಹ್ರೇನ್–ಮಂಗಳೂರು ನೇರ ವಿಮಾನ ಮಾರ್ಗವನ್ನು ಶೀಘ್ರದಲ್ಲೇ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here