ಹುದುಗಿಸುವ ತೊಂದರೆ ಇಲ್ಲ – ಧಿಡೀರ್ ಉಪಾಹಾರಕ್ಕೆ ಟೊಮೆಟೊ ದೋಸೆ ಸೂಪರ್ ಆಯ್ಕೆ

0
108

ದಕ್ಷಿಣ ಭಾರತೀಯರ ಮನೆಗಳಲ್ಲಿ ದೋಸೆ ಪ್ರಮುಖ ಉಪಾಹಾರವಾಗಿದ್ದರೂ, ಅದನ್ನು ತಯಾರಿಸಲು ಸಾಮಾನ್ಯವಾಗಿ ಹಿಟ್ಟು ಹುದುಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಟೊಮೆಟೊ ದೋಸೆ ಒಂದು ಸುಲಭ ಮತ್ತು ವೇಗದ ಆಯ್ಕೆ – ಇದಕ್ಕೆ ಹುದುಗುವಿಕೆಯ ಅಗತ್ಯವೇ ಇಲ್ಲ.

ಬೆಳಿಗ್ಗೆ ಸಮಯ ಕಡಿಮೆ ಇರುವವರು, ಬ್ಯಾಚುಲರ್ಸ್‌ ಅಥವಾ ತಕ್ಷಣ ಉಪಾಹಾರ ಬೇಕಾದಾಗ ಈ ಟೊಮೆಟೊ ದೋಸೆ ಅತ್ಯುತ್ತಮ ಪರಿಹಾರ. ರುಚಿಯ ಜೊತೆಗೆ ಗರಿಗರಿಯಾಗಿರುವ ಈ ದೋಸೆ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು:

  • 3 ಟೊಮೆಟೊ
  • 3 ಒಣ ಕೆಂಪು ಮೆಣಸಿನಕಾಯಿ
  • 1 ಇಂಚು ಶುಂಠಿ
  • ½ ಕಪ್ ರವೆ
  • ½ ಕಪ್ ಅಕ್ಕಿ ಹಿಟ್ಟು
  • ¼ ಕಪ್ ಗೋಧಿ ಹಿಟ್ಟು
  • 3 ಕಪ್ ನೀರು
  • 1 ಸಣ್ಣಗೆ ಹೆಚ್ಚಿದ ಈರುಳ್ಳಿ
  • 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು
  • 1 ಟೀಸ್ಪೂನ್ ಜೀರಿಗೆ
  • ½ ಟೀಸ್ಪೂನ್ ಮೆಣಸಿನ ಪುಡಿ
  • 1 ಟೀಸ್ಪೂನ್ ಉಪ್ಪು
  • ಹುರಿಯಲು ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ಟೊಮೆಟೊ, ಒಣ ಮೆಣಸಿನಕಾಯಿ ಮತ್ತು ಶುಂಠಿಯನ್ನು ನಯವಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಅಕ್ಕಿ ಹಿಟ್ಟು, ರವೆ ಮತ್ತು ಗೋಧಿ ಹಿಟ್ಟು ಸೇರಿಸಿ ನೀರಿನಿಂದ ದೋಸೆಯ ಹದಕ್ಕೆ ಕಲಸಿಕೊಳ್ಳಿ.

ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು ಸುಮಾರು 20 ನಿಮಿಷ ನೆನೆಯಲು ಬಿಡಿ – ಇದರಿಂದ ರವೆ ನೀರನ್ನು ಹೀರಿಕೊಂಡು ದೋಸೆ ಗರಿಗರಿಯಾಗುತ್ತದೆ.

ನಂತರ ದೋಸೆ ತವಾ ಕಾಯಿಸಿ, ನೀರು ದೋಸೆಯಂತೆ ಹಿಟ್ಟನ್ನು ಸುರಿದು, ಸುತ್ತಲೂ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.

ಹೀಗೆ ಮಾಡಿದರೆ ಕೆಂಪಾಗಿ, ಗರಿಗರಿಯಾದ ಟೊಮೆಟೊ ದೋಸೆ ಸಿದ್ಧ. ಇದರಲ್ಲಿ ಟೊಮೆಟೊ ಹುಳಿ ಮತ್ತು ಖಾರ ರುಚಿ ಇರುವುದರಿಂದ ಚಟ್ನಿ ಇಲ್ಲದೆ ತಿನ್ನಬಹುದಾದರೂ, ಬೇಕಾದರೆ ತೆಂಗಿನಕಾಯಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸವಿಯಬಹುದು.

LEAVE A REPLY

Please enter your comment!
Please enter your name here