ಪೆಟ್ರೋಲ್ -ಡಿಸೇಲ್ ಬಳಕೆ ಕಡಿಮೆ ಮಾಡಿ ನಾಡಿನ ಜನತೆಗೆ ಮೋದಿ ಕರೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ತೀವ್ರ ಖಂಡನೆ

0
8

ಪೆಟ್ರೋಲ್ ಡಿಸೇಲ್ ಕಡಿಮೆ ಮಾಡುವುದು ಇದು ನಮ್ಮ ದೇಶದಲ್ಲಿ ಸಾಧ್ಯವೇ ಇಲ್ಲದ ಮಾತು ಪೆಟ್ರೋಲ್ –ಡಿಸೇಲ್ನಲ್ಲಿ ಒಡಾಡುವ ವಾಹನಗಳನ್ನು ತಕ್ಷಣವೇ ನಿಲ್ಲಿಸುವುದು ಅಸಾಧ್ಯವಾದ ಮಾತು ಮೋದಿಯ ಈ ಮಾತಿನ ರ‍್ಮವೇನು ಎಂದು ಐವನ್ ಡಿʼಸೋಜಾ ಪ್ರಶ್ನೆ ಮಾಡಿದ್ದಾರೆ. ಪೆಟ್ರೋಲ್ –ಡಿಸೇಲ್ ಅಭಾವದ ಕಾರಣ ನೀಡಿ ಪೆಟ್ರೋಲ್ –ಡಿಸೇಲ್ ನ ದರ ಏರಿಕೆ ಮಾಡುವ ಇದು ಒಂದು ತಂತ್ರವಾಗಿದೆ ಈ ರೀತಿಯಾದರೆ ದೇಶದ ಜನರ ಜೀವನವನ್ನು ದಿನೇ ದಿನೇ ಸುಸ್ತು ಮಾಡುತ್ತಿದೆ. ದೇಶದಲ್ಲಿ ದುಡಿಯುವ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿರುವಾಗ ಪೆಟ್ರೋಲ್ ಹಾಗೂ ಡಿಸೇಲ್ನ ಅನಿವರ‍್ಯತೆ ದಿನೇ ದಿನೇ ಜಾಸ್ತಿಯಾಗುತ್ತಾ ಹೋಗುತ್ತಿದೆ. ಐದು ದೇಶಗಳ ಚುನಾವಣೆ ಮಗಿದ ಬಳಿಕ ಪೆಟ್ರೋಲ್ –ಡಿಸೇಲ್ ಬೆಲೆ ಎರಿಕೆ ಮಾಡಿ ಇದೇ ರೀತಿ ದರ ಜಾಸ್ತಿ ಮಾಡಿದರೆ ದುಡಿಯುವ ರ‍್ಗವನ್ನು ಬೀದಿಯಲ್ಲಿ ಹಾಕುವುದು ಖಂಡಿತಾ.

ಯುದ್ದದ ಒಂದು ಕಾರಣವನ್ನು ನೀಡಿ, ಪೆಟ್ರೋಲ್-ಡಿಸೇಲ್ ಗ್ಯಾಸ್ಗಳ ಬೆಲೆಯನ್ನು ಏರಿಕೆಯನ್ನು ಮಾಡುವುದು ಖಂಡನೀಯ ಎಂದು ಐವನ್ ಡಿʼಸೋಜಾ ತಿಳೀಸಿದ್ದಾರೆ. ಸಾರಿಗೆ ವಿಚಾರದಲ್ಲಿ ಯಾವುದೇ ಬಳಕೆಯನ್ನು ಕಡಿಮೆ ಮಾಡಲಾಗುವುದಿಲ್ಲ ದರ ಏರಿಕೆ ಹೀಗೆಯೇ ಮುಂದುವರಿದರೆ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಐವನ್ ಡಿʼಸೋಜಾ ಎಚ್ಚರಿಸಿದ್ದಾರೆ.

ದೇಶದ ಪ್ರಧಾನಿಗೆ ಪಕ್ಷದ ಚುನಾವಣೆಯು ಮಾತ್ರ ಗಮನದಲ್ಲಿರುವಂತಿದೆ ಜನರ ಹಿತದೃಷ್ಟಿಯಿಂದ ಅಲ್ಲ. ಮೋದಿಯವರು ಪಕ್ಷದ ಅಭಿವೃದ್ದಿಗಾಗಿ ಮಾತ್ರ ಮೋದಿಯವರು ಕೆಲಸಮಾಡುತ್ತಿದ್ದಾರೆ ಎಂದ ಸಾಬೀತಾಗುತ್ತದೆ ಸಾಮಾನ್ಯ ಜನರ ಅಭಿವೃದ್ದಿಗಾಗಿ ಅಲ್ಲ ಸ್ಪಷ್ಟವಾಗುತ್ತದೆ ಎಂದು ಐವನ್ ಡಿಸೋಜಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here