
ಉಡುಪಿ : ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿಯ ಪದಗ್ರಹಣ ಸಮಾರಂಭವು ಜುಲೈ 12ರಂದು ಸಂಜೆ ಉಡುಪಿಯ ಹೋಟೆಲ್ ದುರ್ಗಾ ಇಂಟರ್‌ನ್ಯಾಷನಲ್‌ನಲ್ಲಿ ನಡೆಯಿತು. ನಿಕಟಪೂರ್ವ ರಾಜ್ಯಪಾಲರಾದ LMF ಅಲೈ ಸುನಿಲ್ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ, ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷರಾದ ಜಿ.ಕೆ. ಹರಿಪ್ರಸಾದ್ ರೈ ಅವರ ಪ್ರಾಯೋಜಕತ್ವದಲ್ಲಿ ಹಾಗೂ ಜಿಲ್ಲಾ ರಾಜ್ಯಪಾಲರಾದ LMF ಅಲೈ ಸುನಿಲ್ ಕುಮಾರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ನಿರ್ದೇಶಕ LMF ಅಲೈ ಟಿ. ಶ್ರೀಧರ್ ಶೆಣವ, ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ LMF ಅಲೈ ಡಾ. ತಲ್ಲೂರು ಶಿವರಾಮ ಶೆಟ್ಟಿ, ಪೂರ್ವ ಅಂತರಾಷ್ಟ್ರೀಯ ನಿರ್ದೇಶಕಿ LMF ಅಲೈ ನವೀನ ಶೆಟ್ಟಿಗಾರ್ ಬೆಳಗಾಂ, ಪ್ರಥಮ ಉಪರಾಜ್ಯಪಾಲ LMF ಅಲೈ ಸುಧಾಕರ್ ಹೆಗ್ಡೆ, ಪ್ರಾಂತೀಯ ಅಧ್ಯಕ್ಷ LMF ಅಲೈ ಡಾ. ಸಂತೋಷ್ ಕುಮಾರ್ ಹಾಗೂ ವಲಯ ಅಧ್ಯಕ್ಷೆ LMF ಅಲೈ ಗಾಯತ್ರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯಪಾಲರಾದ LMF ಅಲೈ ಸುನಿಲ್ ಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿಯ ಉದ್ಘಾಟನೆ ನೆರವೇರಿಸಿದರು.
ನೂತನ ಪದಾಧಿಕಾರಿಗಳ ಪದಗ್ರಹಣ
ಕ್ಲಬ್ಬಿನ ನೂತನ ಅಧ್ಯಕ್ಷರಾಗಿ LMF ಅಲೈ ಸುರೇಖಾ ಆರ್. ಶೆಟ್ಟಿ, ಕಾರ್ಯದರ್ಶಿಯಾಗಿ LMF ಅಲೈ ಜ್ಯೋತಿ ಆರ್. ಶೆಟ್ಟಿ, ಕೋಶಾಧಿಕಾರಿಯಾಗಿ ಅಲೈ ನಿತಿನ್ ಪದಗ್ರಹಣ ಸ್ವೀಕರಿಸಿದರು. ಪ್ರಥಮ ಉಪಾಧ್ಯಕ್ಷರಾಗಿ ಅಲೈ ದಯಾನಂದ ಕಲ್ಮಾಡಿ, ದ್ವಿತೀಯ ಉಪಾಧ್ಯಕ್ಷರಾಗಿ ಅಲೈ ನಾಗರಾಜ್ ಹಾಗೂ ತೃತೀಯ ಉಪಾಧ್ಯಕ್ಷರಾಗಿ ಸುರೇಂದ್ರ ಹಾವಂಜೆ ಅಧಿಕಾರ ಸ್ವೀಕರಿಸಿದರು.
ಜೊತೆ ಕಾರ್ಯದರ್ಶಿಯಾಗಿ ಅಲೈ ರಾಧಾಕೃಷ್ಣ ಆರ್. ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಅಲೈ ರತ್ನಾಕರ ಹಾವಂಜೆ ಹಾಗೂ ಮಂಡಳಿ ನಿರ್ದೇಶಕರಾಗಿ ಅಲೈ ಈಶ್ವರ್ ಚಿಟ್ಪಾಡಿ, ಅಲೈ ರಮಾದೇವಿ, ಅಲೈ ಸುಜಾತ ಪೂಂಜ, ಅಲೈ ಗೀತಾ ಜಿ. ಶೆಟ್ಟಿ, ಅಲೈ ಸುಕುಮಾರ್ ಶೆಟ್ಟಿ ಮತ್ತು ಅಲೈ ಪವನ್ ಕುಮಾರ್ ಶೆಟ್ಟಿ ಪದಗ್ರಹಣ ಮಾಡಿದರು.
ಸದಸ್ಯರಾಗಿ ಅಲೈ ಅನಿಲ್ ಮಸ್ಕರೇನಸ್, ಅಲೈ ಜೋಸೆಫ್ ಡಿಸೋಜಾ, ಅಲೈ ಮಾಧವಿ ಸಿ. ಮೆಂಡನ್ ಹಾಗೂ ಅಲೈ ಅನಿಲ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಎಲ್ಲರಿಗೂ ಜಿಲ್ಲಾ ರಾಜ್ಯಪಾಲರಾದ LMF ಅಲೈ ಸುನಿಲ್ ಕುಮಾರ್ ಶೆಟ್ಟಿ ಅವರು ಪದಗ್ರಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಅಲೈ ರಾಮಚಂದ್ರ ಭಟ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಅಲೈ ಎಂ. ಕೃಷ್ಣ ಆಳ್ವ ಹಾಗೂ ಜಿಲ್ಲಾ ಸಂಪುಟ PRO ಡಾ. ಜಗದೀಶ್ ಹೊಳ್ಳ ಉಪಸ್ಥಿತರಿದ್ದರು.
ಮೂವರು ಸಾಧಕರಿಗೆ ಸನ್ಮಾನ
ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು.
ಕರಾಟೆ ಪಟು, ಕರಾಟೆ ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ರಘುರಾಜ್ ಪಣಿಯಾಡಿ ಅವರನ್ನು ಸನ್ಮಾನಿಸಲಾಯಿತು. ಕಳೆದ 20 ವರ್ಷಗಳಿಂದ ಕಾಪು ರಂಗತರಂಗ ತಂಡದ ನಾಟಕ ಕಲಾವಿದರಾಗಿ ಸೇವೆ ಸಲ್ಲಿಸಿರುವ ಅವರು 25ಕ್ಕೂ ಅಧಿಕ ಬಾರಿ ವಿದೇಶಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. ಮಾರ್ಷಿಯಲ್ ಆರ್ಟ್ಸ್, ಕರಾಟೆ ಹಾಗೂ ಕಿಕ್ ಬಾಕ್ಸಿಂಗ್ ಕ್ಷೇತ್ರದಲ್ಲಿ 35 ವರ್ಷಗಳಿಂದ ತರಬೇತಿ ನೀಡುತ್ತಿದ್ದು, ಅವರ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಟೂರ್ನಮೆಂಟ್‌ನ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಬುಡೋಕಾನ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಹಾಗೂ ತೀರ್ಪುಗಾರರ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಮಾದೇವಿ ಅವರನ್ನೂ ಸನ್ಮಾನಿಸಲಾಯಿತು. ಸಹಕಾರಿ ಸಂಘದ ಅಧ್ಯಕ್ಷೆಯಾಗಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಯಾಗಿ ಹಾಗೂ ನಗರ ಕುಟುಂಬ ಕಲ್ಯಾಣ ಕೇಂದ್ರ ಸಮಿತಿಯ ಹಣಕಾಸು ಸಲಹೆಗಾರರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿ ಅಂಗನವಾಡಿ ನಡೆಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. 100 ನವೋದಯ ಸ್ವಸಹಾಯ ಸಂಘಗಳನ್ನು ರಚಿಸಿ, ಮಾನ್ಯ ರಾಜೇಂದ್ರ ಕುಮಾರ್ ಅವರಿಂದ ಬಂಗಾರದ ಪದಕ ಪಡೆದಿರುವುದು ಅವರ ಸಾಧನೆಗಳಲ್ಲಿ ಒಂದಾಗಿದೆ.
ಹಾವಂಜೆ ನಿವಾಸಿ ರತ್ನಾಕರ ಅವರನ್ನೂ ಸನ್ಮಾನಿಸಲಾಯಿತು. ಅವರು 38 ಬಾರಿ ರಕ್ತದಾನ ಮಾಡಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಅವರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿಯ ಪ್ರಾಯೋಜಕರಾದ ಜಿ.ಕೆ. ಹರಿಪ್ರಸಾದ್ ರೈ ಕಾರಮೊಗೇರು ಗುತ್ತಿನವರನ್ನು ಜಿಲ್ಲಾ ಅಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯಪಾಲರು ಹಾಗೂ ಅಂತರಾಷ್ಟ್ರೀಯ ಕ್ಲಬ್ ಪದಾಧಿಕಾರಿಗಳು ಸನ್ಮಾನಿಸಿದರು.
ಅಧ್ಯಕ್ಷೆ LMF ಅಲೈ ಸುರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಜ್ಯೋತಿ ಆರ್. ಶೆಟ್ಟಿ ವಂದನಾರ್ಪಣೆಗೈದರು. ಜಿಲ್ಲಾ ಸಂಪುಟ PRO ಅಲೈ ಡಾ. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
