ಗ್ರಾ. ಪo ನಿವೃತ್ತ ಅಭಿವೃದ್ಧಿ ಅಧಿಕಾರಿ : ಪಿ. ಹೆಚ್. ಪ್ರಕಾಶ್ ಶೆಟ್ಟಿ ಇವರಿಗೆ ಗೌರವ

0
8

ನಾವರ ಗುತ್ತು ರವಿರಾಜ ಹೆಗ್ಡೆ ಮತ್ತು ವಿಮಲಾವತಿ ಅಮ್ಮ ಇವರು ಮನೆಗೆ ಕರೆಸಿ ಪ್ರಕಾಶ್ ಶೆಟ್ಟಿ ಇವರ ಸರಕಾರಿ ಸೇವೆ ಮತ್ತು ಸಮಾಜ ಸೇವೆ ಗುರುತಿಸಿ ಗೌರವಿಸಿದರು.

ಹಿಂದಿನ ಮಂಡಲ ಪಂಚಾಯತು ಅಸ್ತಿತ್ವ ಇದ್ದಾಗ ನಾವರ ಗುತ್ತು ರವಿರಾಜ ಹೆಗ್ಡೆ ಅಳದಂಗಡಿ ಪoಚಾಯತು ಸದಸ್ಯರಾಗಿದ್ದ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಇವರು ಅಳದಂಗಡಿ ಪಂಚಾಯತ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆ ನೆನಪುಗಳು ಮತ್ತು ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಮಾಡಿ ಎಲ್ಲರ ಗೌರವಕ್ಕೆ ಪಾತ್ರರಾಗಿರುವುದರಿಂದ ಅಭಿಮಾನ ಪ್ರೀತಿ ಹಿರಿಯರ ಕಡೆಯಿಂದ ದೊರಕಿರುವುದು ಎಲ್ಲಾ ಸನ್ಮಾನಕ್ಕಿಂತ ಮಿಗಿಲಾಗಿದೆ.