ಮುಗುಳಿಯ ಸಜೀಪ ಮುನ್ನೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನ ಸಭಾಭವನ ನಿರ್ಮಾಣಕ್ಕೆ ಚಾಲನೆ

0
15

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ಶ್ರೀ ದೇವಾಲಯದ ಉತ್ತರ ಭಾಗದಲ್ಲಿ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವಾಸ್ತು ಬದ್ಧವಾಗಿನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲು ತಾಂತ್ರಿಕ ವಿನ್ಯಾಸ ಮಾಹಿತಿ ಮಾರ್ಗದರ್ಶನ ನೀಡಲು ಯುವ ಇಂಜಿನಿಯರ್ ರಕ್ಷಿತ್ ಶೆಟ್ಟಿ ದೇವಾಲಯಕ್ಕೆ ಆಗಮಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.

ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ, ಜಯ ಶಂಕರ ಬಾಸ್ರಿ ತಾಯ, ಉದ್ಯಮಿ ಅಚಲ್ ಕೃಷ್ಣ ಭಟ್, ಗುತ್ತಿಗೆದಾರ ಎಂ ಮಹಾಬಲ ಕೊಟ್ಟಾರಿ, ಅರ್ಚಕ ಕೃಷ್ಣ ಭಟ್ಟ.ಕೆ,ಸೀತಾರಾಮ ಶೆಟ್ಟಿ , ಎ .ಹರಿಪ್ರಸಾದ ಭಂಡಾರಿ, ಧನಂಜಯ ಶೆಟ್ಟಿ ಪರಾರಿ ಗುತ್ತು, ರವಿರಾಜ್ ಶೆಟ್ಟಿ.ಪಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here