ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೈದನೇ ಉಪನ್ಯಾಸ

0
2

“ಧೈರ್ಯ, ಸೇವೆ ಮತ್ತುಆತ್ಮಶಕ್ತಿಯ ಪ್ರತೀಕ–ವಿವೇಕಾನಂದರು” –ಡಾ. ಧನಂಜಯ ಕುಂಬ್ಳೆ

“ಕಾವ್ಯಕನ್ನಡಿಯಲ್ಲಿಕಂಡ ವಿವೇಕಾನಂದರು” ಎಂಬ ವಿಷಯವು ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವವನ್ನು ಭಾವನಾತ್ಮಕ ಹಾಗೂ ಆದರ್ಶಮಯದೃಷ್ಟಿಯಿಂದ ಪರಿಚಯಿಸುತ್ತದೆ. ವಿವೇಕಾನಂದರು ಕೇವಲ ಸಂನ್ಯಾಸಿಯಲ್ಲ; ಅವರುಜಾಗೃತ ಭಾರತದಚೇತನ, ಯುವಶಕ್ತಿಯ ಪ್ರತೀಕ ಹಾಗೂ ಆತ್ಮವಿಶ್ವಾಸದಜ್ಯೋತಿಯಾಗಿದ್ದಾರೆ. ಅವರ ಮಾತುಗಳು ಮತ್ತು ಚಿಂತನೆಗಳು ಅನೇಕ ಹೃದಯಗಳಲ್ಲಿ ಸ್ಪೂರ್ತಿಯ ಅಲೆಗಳನ್ನು ಮೂಡಿಸಿ, ಮಾನವನೊಳಗೆ ಅಡಗಿರುವ ಶಕ್ತಿಯನ್ನು ಹೊರತೆಗೆದವು.

ವಿವೇಕಾನಂದರ ಜೀವನವುತ್ಯಾಗ, ಸೇವೆ, ದೇಶಭಕ್ತಿ ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ. ಕಾವ್ಯದಲ್ಲಿಅವರು ಶಕ್ತಿಯರೂಪವಾಗಿ, ಧೈರ್ಯದ ಸಂಕೇತವಾಗಿ ಹಾಗೂ ಮಾನವ ಸೇವೆಯನ್ನು ಶಿವ ಸೇವೆಯೆಂದು ಸಾರಿದ ಮಹಾನ್‌ಚಿಂತಕರಾಗಿ ಮೂಡಿಬರುತ್ತಾರೆ. ಯುವಜನತೆಆತ್ಮವಿಶ್ವಾಸದಿಂದಎದ್ದು ನಿಂತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂಬ ಅವರ ಸಂದೇಶ ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.

ಸ್ವಾಮಿ ವಿವೇಕಾನಂದರು ಭಾರತದೇಶದ ಆತ್ಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ ಯುಗ ಪುರುಷರು. ಅವರ ಚಿಂತನೆಗಳು ಕೇವಲ ಆಧ್ಯಾತ್ಮಿಕತೆಯಲ್ಲ, ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ದಾರಿದೀಪವಾಗಿವೆ. ಕಾವ್ಯದ ಕನ್ನಡಿಯಲ್ಲಿ ಕಾಣುವ ವಿವೇಕಾನಂದರು ನಮಗೆ ಧೈರ್ಯ, ಸೇವಾಭಾವ, ಮಾನವೀಯತೆ ಮತ್ತುಉನ್ನತ ಆದರ್ಶಗಳ ಜೀವನದ ಮಹತ್ವವನ್ನು ನೆನಪಿಸುತ್ತಾರೆ. ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಅಧ್ಯಯನ ಸಂಸ್ಥೆ ಇದರ ಸಹ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದಅಧ್ಯಯನಕೇAದ್ರದಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿಉಪನ್ಯಾಸಕಾರ್ಯಕ್ರಮದಐವತ್ತೈದನೇಉಪನ್ಯಾಸದಲ್ಲಿ“ಕಾವ್ಯಕನ್ನಡಿಯಲ್ಲಿಕಂಡ ವಿವೇಕಾನಂದರು” ಎಂಬ ವಿಷಯದಕುರಿತುಅವರು ಮಾತನಾಡಿದರು. ಈ ಕಾರ್ಯಕ್ರಮವುಎಸ್.ಸಿ.ಎಸ್. ಪ್ರಥಮದರ್ಜೆಕಾಲೇಜು, ಉರ್ವ, ಮಂಗಳೂರು ಇಲ್ಲಿ ಜರುಗಿತು.

ಈ ಸಂದರ್ಭದಲ್ಲಿ, ಹಾರ್ದಿಕ್ ಪಿ. ಚೌಹಾನ್‌ಪ್ರಾಂಶುಪಾಲರು, ಎಸ್.ಸಿ.ಎಸ್. ಪ್ರಥಮದರ್ಜೆಕಾಲೇಜು, ಉರ್ವ, ಮಂಗಳೂರು ಇವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದರು. ಅಶ್ವಿನಿ ಎಸ್. ವಿದ್ಯಾರ್ಥಿಕಲ್ಯಾಣಾಧಿಕಾರಿ, ಎಸ್.ಸಿ.ಎಸ್. ಪ್ರಥಮದರ್ಜೆಕಾಲೇಜು, ಉರ್ವ, ಮಂಗಳೂರು,ಕು. ಜಾಯ್ಲಿನ್‌ಆರ್. ಪಿಂಟೋಉಪಾಧ್ಯಕ್ಷರು, ವಿದ್ಯಾರ್ಥಿಕಲ್ಯಾಣಸಮಿತಿಮತ್ತುಉಪನ್ಯಾಸಕರು ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್.ಸಿ.ಎಸ್. ಪ್ರಥಮದರ್ಜೆಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಮತ್ತುಕನ್ನಡ ವಿಭಾಗದ ಮುಖ್ಯಸ್ಥರಾದ ಸುಚಿತ್ರಾ ಪಿ. ಶೆಟ್ಟಿಸ್ವಾಗತಿಸಿ, ತಿಲಕ್‌ಗೌಡ ವಿದ್ಯಾರ್ಥಿಕಲ್ಯಾಣಾಧಿಕಾರಿ, ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜು, ಉರ್ವ, ಮಂಗಳೂರು ವಂದಿಸಿದರು.

ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here