ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಲೋಕಸಭಾ ಸದಸ್ಯರ ಭೇಟಿ

0
8

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರನ್ನು ಸೇವಾಭಾರತಿ ತಂಡ ಮೇ 12 ರಂದು ಭೇಟಿ ನೀಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು ಪ್ರಸ್ತಾಪಿಸಿ ಸಹಕರಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ ವಿನಾಯಕ ರಾವ್, ಸೇವಾಭಾರತಿಯ ಖಜಾಂಚಿ ಜೈ ರಾಜ್ ಸಾಲ್ಯಾನ್ ಕಾನರ್ಪ, ಟ್ರಸ್ಟಿ ಪೃಥ್ವಿಶ್ ಹಾಗೂ ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಸ್ವಯಂಸೇವಕರಾದ ಜಯರಾಜ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here