ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು” ಉಪನ್ಯಾಸ ಕಾರ್ಯಕ್ರಮ

0
6

ಮಂಗಳೂರು : ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ 12 ದಂದು”ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು” ಎಂಬ ವಿಷಯದ ಕುರಿತು ನಡೆದ ವಿವೇಕ ವಾಣಿ ಉಪನ್ಯಾಸ ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌.ವಿ.ಪಿ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಅವರು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ, ಸೇವಾ ಮನೋಭಾವ, ದೇಶಭಕ್ತಿ ಹಾಗೂ ಯುವಜನತೆಗೆ ನೀಡಿದ ಸಂದೇಶಗಳ ಕುರಿತು ಮನಮುಟ್ಟುವಂತೆ ಉಪನ್ಯಾಸ ನೀಡಿದರು.

ಸ್ವಾಮಿ ವಿವೇಕಾನಂದರು ಕೇವಲ ಸನ್ಯಾಸಿಯಲ್ಲ, ಅವರು ಜಾಗೃತ ಭಾರತದ ಚೇತನ, ಯುವಶಕ್ತಿಯ ಪ್ರತೀಕ ಹಾಗೂ ಆತ್ಮವಿಶ್ವಾಸದ ಜ್ಯೋತಿಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಅವರ ಚಿಂತನೆಗಳು ಇಂದಿಗೂ ಯುವಜನತೆಯಲ್ಲಿ ಸೇವಾಭಾವ, ಧೈರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿವೆ ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಎಸ್ ಸಿ ಎಸ್ ಕಾಲೇಜಿನಲ್ಲಿ ಸುಂದರವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳು ಹಾಗೂ ಯುವಜನತೆಗೆ ನೀಡಿದ ಪ್ರೇರಣಾದಾಯಕ ಸಂದೇಶಗಳ ಕುರಿತು ಮನಮುಟ್ಟುವಂತೆ ಮಾತನಾಡಿದರು.

ಅವರು, “ಯುವಶಕ್ತಿ ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಶಕ್ತಿ” ಎಂಬ ವಿವೇಕಾನಂದರ ಚಿಂತನೆಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಸುಚಿತ್ರ .ಪಿ. ಶೆಟ್ಟಿ ಸ್ವಾಗತಿಸಿ ಭಾಷಣಕಾರರ ಪರಿಚಯವನ್ನು ಮಾಡಿದರು.

ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಮಾರ್ಗದರ್ಶಕರಾದ ಪ್ರೊ ತಿಲಕ್ ಗೌಡ ವಂದಿಸಿದರು, ಸಂಯೋಜಕರಾದ ರಾಮಕೃಷ್ಣ ಆಶ್ರಮದ ಸಜಿತ್ , ಸ್ವಯಂ ಸೇವಕರಾದ ಸನತ್ , ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಮಾರ್ಗದರ್ಶಕರಾದ ಅಶ್ವಿನಿ ಎಸ್‌. ಹಾಗೂ ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಕಾರ್ಯದರ್ಶಿ ಕು. ಜಾಯ್ಲಿನ್ ರೆವೆನೋ ಪಿಂಟೋ ಉಪಸ್ಥಿತರಿದ್ದರು. ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here