ದ.ಕ.ಜಿಲ್ಲಾ ಗ್ಯಾರೇಜು ಮಾಲಕರ, ನೌಕರರ ಜಿಲ್ಲಾ ಮಟ್ಟದ ಪಂದ್ಯಾಟ

0
3

ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ,(ರಿ) ಮಂಗಳೂರು.(ದ. ಕ. ಮತ್ತು ಉಡುಪಿ ಜಿಲ್ಲೆ )ಗ್ಯಾರೇಜ್ ಮಾಲಕರ ಮತ್ತು ನೌಕರರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಮೀನುಗಾರಿಕಾ ಕಾಲೇಜು ಮೈದಾನ ಎಕ್ಕೂರು ಮಂಗಳೂರು ಇಲ್ಲಿ ನಡೆಯಿತು. ಮೀನುಗಾರಿಕಾ ಕಾಲೇಜು ಮಂಗಳೂರು ಸಹಾಯಕ ಪ್ರಾಧ್ಯಾಪಕ ಡಾ ಮನೋಜ್ ಕುಮಾರ್ ಉದ್ಘಾಟಿಸಿದರು.

ವೇದಿಕೆಯಲ್ಲಿ ನಿಕಟ ಪೂರ್ವ ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಭರತ್ ಕುಮಾರ್, ರಿಲಾಯನ್ಸ್ ಲುಬ್ರಿಕೆಂಟ್ಸ್ ಮಂಗಳೂರು ಇದರ ಮಾಲಕರಾದ ಮೊಹಮ್ಮದ್ ಆಲಿ, ನೆಹರು ಯುವ ಕೇಂದ್ರ ಮಂಗಳೂರು ಇದರ ಆಡಳಿತ ಅಧಿಕಾರಿ ಜಗದೀಶ್ ಕೆ,ಸಂಘದ ಅಧ್ಯಕ್ಷ ದಿನಕರ ಕುಲಾಲ್, ಚೇರ್ಮನ್ ಜನಾರ್ಧನ್ ಎ, ಕೋಶಾಧಿಕಾರಿ ಕಿರಣ್ ರಾಜ್, ಉಪಾಧ್ಯಕ್ಷರಾದ ಅಬ್ದುಲ್ ಮೊಯ್ದಿನ್ ಕಾರ್ಕಳ, ಸತೀಶ್ ಗಟ್ಟಿ ಜಿಎಂಎಸ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಮುರಳಿ ಕೃಷ್ಣ ಉಪಸ್ತಿತರಿದ್ದರು.
ಪ್ರಥಮ ನಗದು ಬಹುಮಾನ ಮತ್ತು ಟ್ರೋಪಿಯನ್ನು ಟೀಮ್ ಜಿಎಂಎಸ್ ಮಂಗಳೂರು ತಂಡ ಹಾಗೂ ದ್ವಿತೀಯ ನಗದು ಬಹುಮಾನ ಮತ್ತು ಟ್ರೋಪಿಯನ್ನು ನಮ್ಮ ಕುಡ್ಲ ಮಂಗಳೂರು ತಂಡ ತಮ್ಮದಾಗಿಸಿಕೊಂಡರು.

ಪ್ರಧಾನ ಕಾರ್ಯದರ್ಶಿ ಕೆ ಎ ರಾಜ್ ಗೋಪಾಲ್ ಸ್ವಾಗತಿಸಿ ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ವಂದಿಸಿ ಸಲಹೆಗಾರ ಕೃಷ್ಣ ಶ್ರೀಯಾನ್ ನಿರೂಪಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here