ವೃತ್ತಿಯ ಏಕತಾನತೆ ಕಳೆಯಲು ವೃತ್ತಿಯ ಜೊತೆಗೆ ಪ್ರವೃತ್ತಿಗಳಿಗೂ ಆದ್ಯತೆ ನೀಡಿದಲ್ಲಿ ಬದುಕು ಹಸನಾಗುತ್ತದೆ ಮತ್ತು ಸಮಾಜಕ್ಕೂ ಸೇವೆ ಸಲ್ಲಿಸಿದಂತಾಗುತ್ತದೆ. ಪ್ರತಿಯೊಬ್ಬರೂ ವೃತ್ತಿಯ ಜೊತೆಗೆ ಸಮಾಜಕ್ಕೂ ಸೇವೆ ಸಲ್ಲಿಸಬೇಕು ಎಂದು ಡಾ ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಇದರ ವತಿಯಿಂದ ಆಯೋಜಿಸಲ್ಪಟ್ಟ ವೃತ್ತಿ ಜೀವನ ಮತ್ತು ಸಾಮಾಜಿಕ ಸೇವೆ ಎಂಬ ವಿಚಾರ ಗೋಷ್ಠಿ ಯಲ್ಲಿ ಅವರು ಮಾತನಾಡಿದರು.ರೋಟರಿ ಬಾಲಭವನ ಮಣ್ಣ ಗುಡ್ಡೆ ಇಲ್ಲಿ ಈ ಕಾರ್ಯಕ್ರಮ ಜರುಗಿತು.
ರೋಟರೀ ಕ್ಲಬ್ ಮಂಗಳೂರು ಹಿಲ್ ಸೈಡ್ ಇದರ ಅಧ್ಯಕ್ಷರಾದ ಪೀಟರ್ ಪಿಂಟೋ ಮತ್ತು ಕಾರ್ಯದರ್ಶಿ ವಾಸುದೇವ ಶೆಟ್ಟಿಗಾರ್ ಉಪಸ್ಥಿತರಿದ್ದರು.

