ಆರ್ಟ್‌ ಆಫ್‌ ಗಿವಿಂಗ್‌: ಶೇರ್‌ ಟು ಶೈನ್‌ ಈ ಬಾರಿಯ ಘೋಷವಾಕ್ಯ

0
6

13 ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ, ಹಲವು ಕಾರ್ಯಕ್ರಮ

ಬೆಂಗಳೂರು : ಆರ್ಟ್‌ ಗಿವಿಂಗ್‌ನ 13 ನೇ ವಾರ್ಷಿಕೋತ್ಸವ ಇದೇ 17 ರಂದು ನಗರದ ಗಾಂಧಿ ಭವನದಲ್ಲಿ ನಡೆಯಲಿದೆ. ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಒಡಿಶಾ ಭುವನೇಶ್ವರದ ಕಳಿಂಗಾ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಡ್ರೀಯಲ್‌ ಟೆಕ್ನಾಲಜಿ, ಕಳಿಂಗಾ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸ್ ಸ್‌ ನ ಸಂಸ್ಥಾಪಕರು ಹಾಗೂ ಸಂಸತ್ತಿನ ಮಾಜಿ ಸದಸ್ಯರಾದ ಡಾ.ಅಚ್ಯುತ ಸಮಂತಾ ಅವರು ಆರಂಭಿಸಿದ ಆರ್ಟ್‌ ಆಫ್‌ ಗಿವಿಂಗ್‌ನ ವಾರ್ಷಿಕೋತ್ಸವ ಕಳೆದ 13 ವರ್ಷಗಳಿಂದ ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ದಾನದ ಮಹತ್ವವನ್ನು ತಿಳಿಸಲು, ದಾನವನ್ನು ಪ್ರೇರೇಪಿಸಲು ಆರಂಭಿಸಿದ ಈ ಉಪಕ್ರಮವು ವಿಶ್ವದ ಹಲವು ರಾಷ್ಟ್ರಗಳಿಗೆ ಹಬ್ಬಿದೆ. ವಿಶ್ವದಾದ್ಯಂತ ಮೇ 17 ರಂದು ಇದರ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದೊಂದು ವಿಷಯದ ಮೇಲೆ ಆಚರಿಸಲಾಗುತ್ತದೆ. ಇದೇ ರೀತಿ ಈ ಬಾರಿ ಶೇರ್‌ ಟು ಶೈನ್‌ ಎಂಬ ಥೀಮ್‌ನಲ್ಲಿ ಆಚರಿಸಲಾಗುತ್ತದೆ.

ಶಾಂತಿ ಮತ್ತು ಸಂತೋಷದ ನಿಜವಾದ ಸಾರವು ಪ್ರತಿಯೊಬ್ಬ ವ್ಯಕ್ತಿಯೊಳಗಿನ ದಾನದ ಮನೋಭಾವವನ್ನು ಜಾಗೃತಗೊಳಿಸುವುದರಲ್ಲಿದೆ. ಆರ್ಟ್ ಆಫ್ ಗಿವಿಂಗ್ ಎನ್ನುವುದು ವಿಶ್ವದಾದ್ಯಂತ ದಾನದ ಸಂಸ್ಕೃತಿಯನ್ನು ಪ್ರೇರೇಪಿಸುವ, ಪೋಷಿಸುವ ಮತ್ತು ಉತ್ತೇಜಿಸಲು ಮೀಸಲಾದ ಒಂದು ಉಪಕ್ರಮವಾಗಿದೆ.

ಗಾಂಧಿ ಭವನದಲ್ಲಿ ಬೆಳಗ್ಗೆ 10.00 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 11.30 ರಿಂದ ಮುಖ್ಯ ಕಾರ್ಯಕ್ರಮ ನಡೆಯಲಿವೆ. ಮೊದಲಿಗೆ ಎಒಜಿ ಸಂಸ್ಥಾಪಕರಾದ ಅಚ್ಯುತ ಸಮಂತ ಅವರ ವಿಶೇಷ ವೀಡಿಯೊ ಸಂದೇಶವಿರಲಿದೆ. ನಂತರ ಖ್ಯಾತ ಗಾಯಕಿ ಸವಿತಕ್ಕ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ, ನೃತ್ಯ ಪ್ರದರ್ಶನ ಇರಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಸಮಾಜದ ಒಳಿತಿಗಾಗಿ ದುಡಿದವರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಲೋಕಾಯುಕ್ತರಾದ ಎನ್‌ ಸಂತೋಷ್‌ ಹೆಗ್ಡೆ, ಒಡಿಶಾ ಹೈಕೋರ್ಟ್‌ನ ಕೃಷ್ಣ ಎಸ್. ದೀಕ್ಷಿತ್, ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ರಾಕೇಶ್ ಸಿಂಗ್, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೋಡೇ ಪಿ. ಕೃಷ್ಣ, ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ಪಿ ಶೇಷಾದ್ರಿ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಸವಿತಕ್ಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ, ಉದ್ಯಮಶೀಲತೆಯ ಪರಿಣತರಾದ ಡಾ. ಎ. ಎಂ. ಸುರೇಶ್, ಕಾರ್ಪೊರೇಟ್ ವ್ಯವಹಾರ ಮತ್ತು ಬ್ರ್ಯಾಂಡಿಂಗ್ ತಂತ್ರಜ್ಞರು, ಸ್ಟಾರ್ಟ್ ಅಪ್ ಸಲಹೆಗಾರರಾದ ಪ್ರಣಬ್ ಕೆ ಪಣಿ, ಭರತನಾಟ್ಯ ಮತ್ತು ಶಿಕ್ಷಣದ ಮೂಲಕ ಯುವ ಪ್ರತಿಭೆಗಳ ಪ್ರೋತ್ಸಾಹಕಿ ಹೆಚ್. ವಿ. ಹೇಮಲತಾ, ಕಂಠದಾನ ಕಲಾವಿದ ಮಾರುತೇಶ್, ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನ ಸಂಸ್ಕೃತಿಯ ಪೋಷಕ ರಾಘವೇಂದ್ರ ಟಿ ವಿ, ಸಿಂಗಿಂಗ್‌ ಬೌಲ್‌ ಥೆರಪಿ ಪರಿಣತರು ಮತ್ತು ಸೌಂಡ್‌ ಹೀಲಿಂಗ್‌ ಸಂಶೋಧಕ ಕೆ. ರಾಕೇಶ್, ಸೃಜನಶೀಲ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪರಿಣತೆ ಸೀಮಾ ಮುರಳೀಧರ್ ಹಾಗೂ ನಿವೃತ್ತ ಸರ್ವೆ ಸೂಪರ್‌ ವೈಜರ್‌ ಶಶಿಧರ್ ವೈ ಬಿ ಅವರನ್ನು ಸನ್ಮಾನಿಸಲಾಗುತ್ತದೆ.

LEAVE A REPLY

Please enter your comment!
Please enter your name here