ಹೆಬ್ರಿ ಕುಚ್ಚೂರು ರಸ್ತೆ ಸರಿಯಾದ ರೀತಿಯಲ್ಲಿ ಅಗಲೀಕರಣ ಮಾಡುವುದಾದರೆ ಮಾತ್ರ ಮಾಡಿ. ಇಲ್ಲದಿದ್ದರೆ ಇಲ್ಲಿಗೆ ಡಾಂಬರೀಕರಣ ಕೆಲಸ ನಿಲ್ಲಿಸಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ಥಳೀಯರ ಗ್ರಾಮಸ್ಥರ ದೂರಿನ ಮೇರೆಗೆ ಉದಯಕುಮಾರ್ ಶೆಟ್ಟಿ ಅವರು ಕೂಡಲೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗೆ ದೂರವಾಣಿ ಕರೆ ಮಾಡಿ. ಸರಿಯಿದ್ದ ಡಾಂಬರು ರಸ್ತೆಗೆ ಪುನಃ ಡಾಂಬರೀಕರಣ ಏಕೆ ಮಾಡುತ್ತೀರಿ. ನೀವು ಫೈಲ್ ಕ್ಲೋಸ್ ಮಾಡ್ಲಿಕ್ಕೆ ಹೀಗೆ ಮಾಡುತ್ತಿದ್ದೀರಿ.
ನೀವು ಈಗ ಮಾಡಿ ಹೋದರೆ ಪುನಃ ಅಗಲೀಕರಣ ಆಗುವುದಿಲ್ಲ. ಅದು ಅಲ್ಲದೆ ಈಗ ಮಳೆಗಾಲ ಸ್ಟಾರ್ಟ್ ಆಗಿದೆ. ಇನ್ನು ಮೂರು ನಾಲ್ಕು ತಿಂಗಳು ಕಾಯುವ ನಂತರ ಅರಣ್ಯ ಇಲಾಖೆಯ ಅನುಮತಿ ಪಡೆದು ನಂತರ ಸರಿಯಾಗಿ ಕಾಮಗಾರಿ ಮಾಡಿ ಎಂದು ಉದಯ್ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ, ಚಾರ ಗ್ರಾಮ್ ಪಂಚಾಯ್ತಿನ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

