ಅಸಮರ್ಪಕ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು – ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳಿಂದ ಆಶ್ವಾಸನೆ..!

0
4

ಹೆಬ್ರಿ ಮಾಂಡಿ ಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಡಾಂಬರೀಕರಣ ನಡೆಯುತ್ತಿದ್ದು. ಇದು ಸಮರ್ಪಕವಾಗಿ ಆಗಲಿಲ್ಲ ಎಂದು ಇಂದು ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಕಾಮಗಾರಿಯನ್ನು ತಡೆದು. ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರು ಮೊದಲೇ ಹೇಳಿದ ಹಾಗೆ ರಸ್ತೆ ಅಗಲೀಕರಣ ಆಗಬೇಕು.

ಇಲ್ಲದಿದ್ದರೆ ಡಾಂಬರೀಕರಣ ಬೇಡ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಹೆಬ್ರಿ ಠಾಣಾಧಿಕಾರಿ ರವಿ ಬಿಕೆ, ಪಿಡಬ್ಲ್ಯೂಡಿ ಇಂಜಿನಿಯರ್ ತ್ರಿನೇಂದ್ರ, ಗುತ್ತಿಗೆದಾರ ವಾದಿರಾಜ ಶೆಟ್ಟಿ ಇವರು ಆಕ್ರೋಶಗೊಂಡ ಗ್ರಾಮಸ್ಥರನ್ನು ಮನವೊಲಿಸಿ ಮಳೆಗಾಲ ಕಳೆದ ನಂತರ ಡಿಸೆಂಬರಲ್ಲಿ ರಸ್ತೆಯ ಮರು ಡಾಂಬರೀಕರಣ ಅಗಲೀಕರಣ ಮಾಡಿಕೊಡುತ್ತವೆ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆಯವರ ಸಮಸ್ಯೆಯಿಂದ ರಸ್ತೆ ಅಗಲೀಕರಣಕ್ಕೆ ವಿಳಂಬವಾಗಿದೆ. ಅರಣ್ಯ ಇಲಾಖೆಯ ಎಫ್ ಸಿ ಸಿಕ್ಕಿದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here