ಬ್ರೋಕರ್ ಹಾವಳಿಗೆ ಕಡಿವಾಣ: ಉಡುಪಿಯಲ್ಲಿ KRS ಪಕ್ಷದಿಂದ ಜನಜಾಗೃತಿ ಕಾರ್ಯಕ್ರಮ

0
12

ಉಡುಪಿ : ದಿನಾಂಕ 20-05-2025ರಂದು Karnataka Rashtra Samithi (KRS) ಪಕ್ಷದ ವತಿಯಿಂದ ಉಡುಪಿ ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಲೈಸೆನ್ಸ್ ಹಾಗೂ ವಾಹನದ ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಯಾವುದೇ ಬ್ರೋಕರ್ ಅಥವಾ ಮಧ್ಯವರ್ತಿಗಳ ಸಹಾಯವಿಲ್ಲದೆ ಸಾರ್ವಜನಿಕರು ತಾವೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ ಎಂಬ ಕುರಿತು ಜನರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿಯವರ ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರಾದ Rajesh K V, ಪ್ರಧಾನ ಕಾರ್ಯದರ್ಶಿ ಕೃಷ್ಣ, ಉಪಾಧ್ಯಕ್ಷ ಸಂತೋಷ, ಕಾರ್ಯದರ್ಶಿಗಳಾದ ವಿಜಯ್ ಮಾರ್ಕು ಹಾಗೂ ಪ್ರಸಾದ್ ಸೇರಿದಂತೆ ಜಿಲ್ಲೆಯ ಹಲವು ಸದಸ್ಯರು ಭಾಗವಹಿಸಿದ್ದರು.

ಇದೇ ವೇಳೆ ಬೈಂದೂರು ತಾಲೂಕು ಅಧ್ಯಕ್ಷರಾದ Shwetha ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕರಿಗೆ ಆರ್‌ಟಿಒ ಸೇವೆಗಳ ಕುರಿತು ಸರಿಯಾದ ಮಾಹಿತಿ ನೀಡಿ, ಬ್ರೋಕರ್‌ಗಳ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here